ನವದೆಹಲಿ: ಬ್ಲ್ಯಾಕ್ ಫಂಗಸ್ ಕಾಯಿಲೆ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ, ಔಷಧ ತಯಾರಿಸಲು ಐದಕ್ಕೂ ಹೆಚ್ಚು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಆ ಕಂಪನಿಗಳು ಜುಲೈ ತಿಂಗಳಿನಿಂದ ಪ್ರತಿ ತಿಂಗಳು 1,11,000 ವಯಲ್ಸ್ ಗಳ ಉತ್ಪಾದನೆಯನ್ನು ಆರಂಭಿಸಲಿವೆ.
ಆಮದು ಮೂಲಕ ಶೀಲಿಂದ್ರ ವಿರೋಧ ಔಷಧದ ದೇಶಿಯ ಲಭ್ಯತೆಗೆ ಪೂರಕವಾಗಿ ಪ್ರಯತ್ನಿಸಲಾಗುತ್ತಿದೆ. ಮೇ ತಿಂಗಳಲ್ಲಿ 3,63,000 ಆಂಫೊಟೆರಿಸಿನ್-ಬಿ ವಯಲ್ಸ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.ಇದರಿಂದಾಗಿ ದೇಶದಲ್ಲಿ ಒಟ್ಟಾರೇ, 5,26,752 ವಯಲ್ಸ್ ಗಳು ಲಭ್ಯವಿರುತ್ತವೆ. ಜೂನ್ ನಲ್ಲಿ 3 ಲಕ್ಷದ 15 ಸಾವಿರ ವಯಲ್ಸ್ ಗಳನ್ನು ಆಮದು ಮಾಡಿಕೊಳ್ಳಲಾಗುವುದು, ದೇಶಿಯ ಪೂರೈಕೆಯೊಂದಿಗೆ ಜೂನ್ ನಲ್ಲಿ ದೇಶಾದ್ಯಂತ 5,70,114 ವಯಲ್ಸ್ ಆಂಫೊಟೆರಿಸಿನ್-ಬಿ ಲಭ್ಯವಿರಲಿದೆ ಎಂದು ಎಂದು ಸಚಿವಾಲಯ ತಿಳಿಸಿದೆ.
ಬ್ಲ್ಯಾಕ್ ಫಂಗಸ್ ಎಂದೇ ಹೆಸರಾಗುತ್ತಿರುವ ಮ್ಯೂಕಾರ್ಮೈಕೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದಾಗಿ ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿರುವುದಾಗಿ ಸಚಿವಾಲಯ
ಹೇಳಿಕೆಯಲ್ಲಿ ತಿಳಿಸಿದೆ.
ಆಂಫೊಟೆರಿಸಿನ್-ಬಿ, ಔಷಧದ ಕೂರತೆಯ ಬಗ್ಗೆಯೂ ವರದಿಯಾಗಿದೆ. ದೇಶಿಯವಾಗಿ ಈ ಔಷಧದ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಔಷಧ ಇಲಾಖೆಯೊಂದಿಗೆ ತೀವ್ರ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.ಜಾಗತಿಕ ಔಷಧ ತಯಾರಿಕ ಕಂಪನಿಗಳ ಪೂರೈಕೆ ಮೂಲಕ ದೇಶಿಯವಾಗಿ ಔಷಧ ಲಭ್ಯತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕೂಡಾ ಪ್ರಯತ್ನಿಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಹೈದ್ರಾಬಾದಿನ ನ್ಯಾಟ್ಕೊ, ವಡೋದರಾದ ಅಲೆಂಬಿಕ್, ಗುಜರಾತಿನ ಗುಫಿಕ್ ಬಯೋಸೈನ್ಸೆಸ್ ಲಿಮಿಟೆಡ್, ಪುಣೆಯ ಎಮುಕ್ಯೂರ್, ಗುಜರಾತ್ ನ ಲೈಕಾ ಔಷಧ ತಯಾರಿಕಾ ಕಂಪನಿಗಳಿಗೆ ಆಂಫೊಟೆರಿಸಿನ್-ಬಿ ಔಷಧ ಉತ್ಪಾದಿಸಲು ಪರವಾನಗಿ ನೀಡಲಾಗಿದೆ. ಈ ಕಂಪನಿಗಳು ಜುಲೈ ತಿಂಗಳಿನಿಂದ ಪ್ರತಿ ತಿಂಗಳು 1,11,000 ಆಂಫೊಟೆರಿಸಿನ್-ಬಿ ವಯಲ್ಸ್ ಗಳನ್ನು ಪ್ರತಿ ತಿಂಗಳು ಉತ್ಪಾದಿಸಲು ಕಾರ್ಯಾರಂಭಿಸಲಿವೆ ಎಂದು ಸಚಿವಾಲಯ ಹೇಳಿದೆ.
ದೇಶದಲ್ಲಿ ಪ್ರಸ್ತುತ ಭರತ್ ಸೆರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್, ಬಿಡಿಆರ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮ ಲಿಮಿಟೆಡ್, ಸಿಪ್ಲಾ, ಲೈಫ್ ಕೇರ್ ಇನ್ನೋವೇಶನ್ ಅಂಡ್ ಮೈಲಾನ್ ಲ್ಯಾಬ್ಯ್ ಈಗಾಗಲೇ ಆಂಪೊಟೆರಿಸನ್-ಬಿ ಔಷಧ ತಯಾರಿಸುತ್ತಿವೆ.