HEALTH TIPS

ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್​

             ನವದೆಹಲಿ: ಕೋವಿಡ್​-19 ಸೋಂಕು ಎಷ್ಟೋ ಕಡೆ ಒಂದೇ ಮನೆಯಲ್ಲಿ ಹಲವರನ್ನು ಬಲಿಪಡೆದಿದ್ದಲ್ಲದೆ, ಅದೆಷ್ಟೋ ತಂದೆ-ತಾಯಂದಿರು ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ. ಮತ್ತೊಂದೆಡೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅಕ್ಷರಶಃ ಅನಾಥರಾಗಿದ್ದೂ ಇದೆ. ಅಂಥ ಮಕ್ಕಳಿಗೆ ಮುಂದೆ ದಿಕ್ಕುದೆಸೆ ಯಾರು, ಅವರ ಕೇರ್​ ಟೇಕರ್​ ಯಾರು ಎಂಬ ಪ್ರಶ್ನೆಗಳು ದೊಡ್ಡದಾಗಿ ಎದುರಾಗಿವೆ. ಅಂಥ ಮಕ್ಕಳ ಇದೀಗ ಪ್ರಧಾನಿ ಮೋದಿ ಆಶಾಕಿರಣವಾಗಿದ್ದಾರೆ. ಅರ್ಥಾತ್ ಪಿಎಂ-ಕೇರ್ಸ್​ ಈ ಮಕ್ಕಳ ಕಾಳಜಿ ವಹಿಸಲಿದೆ.


         ಕೋವಿಡ್​-19 ಸೋಂಕಿನಿಂದ ಅಪ್ಪ-ಅಮ್ಮ ಇಬ್ಬರನ್ನೂ ಅಥವಾ ಪಾಲಕರನ್ನು ಕಳೆದುಕೊಂಡು ಅನಾಥರಂತಾಗಿರುವ ಮಕ್ಕಳು ಚಿಂತಿತರಾಗಬೇಕಿಲ್ಲ ಎಂಬುದಾಗಿ ಪ್ರಧಾನಮಂತ್ರಿ ಮೋದಿ ಅಭಯ ನೀಡಿದ್ದಾರೆ. ಅಂಥ ಮಕ್ಕಳಿಗೆಂದೇ 'ಪಿಎಂ ಕೇರ್ಸ್​ ಫಾರ್ ಚಿಲ್ಡ್ರೆನ್​' ಯೋಜನೆ ರೂಪಿಸಲಾಗಿದೆ. ಇದರ ಮೂಲಕ ಅಂಥ ಮಕ್ಕಳಿಗೆ ಮಾಸಿಕ ಶಿಷ್ಯವೇತನ ಸಿಗಲಿದೆ ಹಾಗೂ ದೊಡ್ಡಮೊತ್ತದ ಧನಸಹಾಯವೂ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

             ಹಾಗಂತ ಈ ಶಿಷ್ಯವೇತನ ಮತ್ತು ಆರ್ಥಿಕ ಸಹಾಯ ತಕ್ಷಣವೇ ಸಿಗುವುದಿಲ್ಲ. ಕೋವಿಡ್​​ನಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳ ವಯಸ್ಸು 18 ವರ್ಷ ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ಸಿಗಲಾರಂಭಿಸುತ್ತದೆ. ಅಲ್ಲದೆ ಆ ಮಕ್ಕಳಿಗೆ 23 ವರ್ಷವಾಗುತ್ತಿದ್ದಂತೆ 10 ಲಕ್ಷ ರೂಪಾಯಿ ಪಿಎಂ ಕೇರ್ಸ್​ ಕಡೆಯಿಂದ ಸಿಗಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯ ತಿಳಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries