ತಿರುವನಂತಪುರ: ರಾಜ್ಯದ ಇನ್ನೂ 11 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟ (ಎನ್‍ಕ್ಯೂಎಎಸ್) ಅನುಮೋದನೆ ದೊರೆತಿದೆ ಎಂದು ಮುಖ್ಯಮಂತ್ರಿ ಹೇಳಿಡಿuvರು. ಈ ಬಗೆಗಿನ ಮಾಹಿತಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋವಿಡ್ ರಕ್ಷಣೆಯ ಹೊರತಾಗಿಯೂ ಎನ್‍ಕ್ಯೂಎಎಸ್ ಲಭಿಸಿರುವುದು ಮಹತ್ತರ ಸಾಧನೆ ಎನ್ನಲು ಅಡ್ಡಿಯಿಲ್ಲ ಎಂದು ಅವರು ಹೇಳಿದರು.
ಮಲಪ್ಪುರಂ ಅತನಿಕಲ್, ಕೋಝಿಕೋಡ್ ಮೂಡಾಡಿ, ಕೊಲ್ಲಂ ಎಲಂಪಲ್ಲೂರ್, ಕಣ್ಣೂರು ಪಾನೂರ್, ತ್ರಿಶೂರ್ ಗೋಸೈಕುನ್ನು, ತಿರುವನಂತಪುರ ವಟ್ಟಿಯೂರ್ಕಾವ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಣ್ಣೂರು ನ್ಯೂ ಮಾಹಿ, ತ್ರಿಶೂರ್ ಪೊರ್ಕಾಲೆಂಗಾಡ್, ಕೊಲ್ಲಂ ಮುರಿಡುಕೋಡ್ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಝಿಕ್ಕೋಡ್ ಪುರಮೇರಿ, ಇಡುಕ್ಕಿಯ ಉಡುಂಬಂಚೋಳ ಎಂಬಂತೆ ಆಸ್ಪತ್ರೆಗಳಿಗೆ ರಾಷ್ಟ್ರೀಯ ಮಾನ್ಯತೆ ಲಭಿಸಿದೆ.
ಕೋವಿಡ್ ತಡೆಗಟ್ಟುವ ಚಟುವಟಿಕೆಗಳ ಹೊರತಾಗಿಯೂ ರಾಜ್ಯದ ಆರೋಗ್ಯ ಸಂಸ್ಥೆಗಳು ಎನ್‍ಕ್ಯೂಎಎಸ್ ಪಡೆಯುತ್ತಿರುವುದು ಒಂದು ದೊಡ್ಡ ಸಾಧನೆಯಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಕೇರಳದಲ್ಲಿ ಅತಿ ಹೆಚ್ಚು ಎನ್‍ಕ್ಯೂಎಎಸ್ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ದೇಶದ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಭಾಗದಲ್ಲಿ ಕೇರಳ ಮೊದಲ 12 ಸ್ಥಾನಗಳಲ್ಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. ತಿರುವನಂತಪುರ ಒಟ್ಟಶೇಖರಮಂಗಲಂ ಪೂಜಾನಾದ್ ಕುಟುಂಬ ಆರೋಗ್ಯ ಕೇಂದ್ರ ಮತ್ತು ಕಾಸರಗೋಡು ಕೈಯ್ಯೂರ್ ಹುತಾತ್ಮರ ಸ್ಮಾರಕ ಕುಟುಂಬ ಆರೋಗ್ಯ ಕೇಂದ್ರವು ಭಾರತದಲ್ಲಿ 99 ಶೇ. ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ.
ಈ ಪೈಕಿ ಒಟ್ಟು 119 ಆರೋಗ್ಯ ಸಂಸ್ಥೆಗಳು ಎನ್‍ಕ್ಯೂಎಎಸ್ ಮಾನ್ಯತೆ ಪಡೆದಿವೆ. ಮೂರು ಜಿಲ್ಲಾ ಆಸ್ಪತ್ರೆಗಳು ಮತ್ತು ನಾಲ್ಕು ತಾಲ್ಲೂಕು ಆಸ್ಪತ್ರೆಗಳಿವೆ. 6,500 ಕ್ಕೂ ಹೆಚ್ಚು ವಿಷಯಗಳನ್ನು ಆಧರಿಸಿ ಸರ್ವೇ ನಡೆಸಿ ಈ ಅನುಮೋದನೆ ನೀಡಲಾಗುತ್ತದೆ. ಮಾನ್ಯತೆ ಪಡೆದ ಪಿಎಚ್‍ಸಿಗಳಿಗೆ ವಾರ್ಷಿಕ 2 ಲಕ್ಷ ರೂ. ಮತ್ತು ಇತರ ಆಸ್ಪತ್ರೆಗಳಿಗೆ ಪ್ರತಿ ಹಾಸಿಗೆ 10,000 ರೂ. ಗಳಂತೆ ವಾರ್ಷಿಕ ಗೌರವ ಧನ ಲಭ್ಯವಾಗುವುದು.