ತಿರುವನಂತಪುರ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಕಳೆದ 1.15 ನಿಮಿಷಗಳ ಲೆಕ್ಕಾಚಾರದಂತೆ ಎಲ್‌ಡಿಎಫ್ ಸರಳ ಬಹುಮತದಿಂದ ಮುಂದಿದೆ. ಎಲ್‌ಡಿಎಫ್ 78 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದ್ದರೆ, ಯುಡಿಎಫ್ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ ಎರಡು ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ವರೆಗಿನ ಎಣಿಕಾ ವೇಗದ ಮತಗಣನೆಯಂತೆ ಎಕ್ಸಿಸ್ಟ್ ಪೋಲ್ ಸಮೀಕ್ಷೆಗಳಂತೆ ಎಲ್ಡಿಎಫ್ ಆಡಳಿತವನ್ನು ಮುಂದುವರಿಸುವ ಸಾಧ್ಯತೆಯನ್ನು ಪುಷ್ಠೀಕರಿಸಿದೆ.
ಈ ಮಧ್ಯೆ ಪಾಲಕ್ಕಾಡಲ್ಲಿ ಎನ್ ಡಿ ಎ ಯ ಮೆಟ್ರೋಮ್ಯಾನ್ ಇ.ಶ್ರೀಧರನ್ 2,300ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.