ಮಂಜೇಶ್ವರ: ಕೆ. ಎಸ್. ಟಿ. ಎ ಮಂಜೇಶ್ವರ ಉಪಜಿಲ್ಲೆಯ ವತಿಯಿಂದ ಆಕ್ಸಿ ಮೀಟರ್ ವಿತರಣೆಯ ಉದ್ಘಾಟನಾ ಸಮಾರಂಭ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜರಗಿತು. ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಜೀನ್ ಲವೀನ ಮೊಂತೇರೊ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ಧೀಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್.ವಿ , ಕುಂಜತ್ತೂರು ಸಿಪಿಐಎಂ ಲೋಕಲ್ ಸಮಿತಿ ಕಾರ್ಯದರ್ಶಿಯೂ, ಕೆ.ಎಸ್.ಟಿ.ಎ ಯ ಮಾಜಿ ಅಧ್ಯಕ್ಷರೂ, ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಬಾಲಕೃಷ್ಣ ಶೆಟ್ಟಿಗಾರ್, ಮಂಜೇಶ್ವರ ಸಿಪಿಐಎಂ ಲೋಕಲ್ ಸಮಿತಿ ಕಾರ್ಯದರ್ಶಿ ಕಮಲಾಕ್ಷ ಕನಿಲ, ಕೆ.ಎಸ್. ಟಿ.ಎ ಜಿಲ್ಲಾ ಸಮಿತಿ ಸದಸ್ಯೆ ಶಶಿಕಲಾ ಸಿ.ಹೆಚ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಧಿಕಾ. ಆರೋಗ್ಯಾಧಿಕಾರಿ ಲಿಯಾಕತ್ ಉಪಸ್ಥಿತರಿದ್ದರು. ಉಪ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿ, ಮಂಜೇಶ್ವರ ಸಮಿತಿ ಕಾರ್ಯದರ್ಶಿ ಗಣೇಶ್ ಪ್ರಸಾದ್ ನಾಯಕ್ ವಂದಿಸಿದರು.
ಬುಧವಾರ ಆಕ್ಸಿ ಮೀಟರ್ ಗಳನ್ನು ವರ್ಕಾಡಿ, ಪೈವಳಿಕೆ, ಪಂಚಾಯತುಗಳ ಎಲ್ಲಾ ವಾರ್ಡುಗಳಿಗೂ, ಇಂದು ಮೀಂಜ ಪಂಚಾಯತ್ ನ ಆರೋಗ್ಯ ಕೇಂದ್ರದಲ್ಲಿಯೂ ವಿತರಿಸಲಾಗುವುದು. ಉಪ ಜಿಲ್ಲಾ ಮಟ್ಟದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರಿಸಾನ ಸಾಬಿರ್ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನ ಟೀಚರ್ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಾರ್ಡಿಗೊಂದರಂತೆ ಆಕ್ಸೀ ಮೀಟರ್ ವಿತರಿಸಲಾಗುವುದು. ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ ರೋಗಿಗಳ ಆಕ್ಸಿಜನ್ ಅಳತೆಗೆ ಆಕ್ಸಿ ಮೀಟರ್ ದೊಡ್ಡ ವರದಾನವಾಗಲಿದೆ. ಕೆ. ಎಸ್. ಟಿ. ಎ ಪ್ರಾಂತ್ಯ ಸಮಿತಿ ಈಗಾಗಲೇ ಆರಂಭಿಸಿದ 1ಕೋಟಿ ರೂ ಮೌಲ್ಯದ 10000 ಗಳಷ್ಟು ಆಕ್ಸಿ ಮೀಟರ್ ವಿತರಣಾ ಅಭಿಯಾನ ರಾಜ್ಯ ಮಟ್ಟದಲ್ಲಿ ಶಿಕ್ಷಣ ಸಚಿವ ಶಿವನ್ ಕುಟ್ಟಿ ಉದ್ಘಾಟನೆ ಮಾಡಿದ್ದರು. ಈ ಆಕ್ಸೀ ಮೀಟರ್ ವಿತರಣೆಯು ನಿರೀಕ್ಷೆಗಿಂತಲೂ ಮೀರಿ ಶಿಕ್ಷಕ ವರ್ಗದ ಹಾಗೂ ಸಮಾಜದ ಪ್ರಶಂಸೆಗೆ ಪಾತ್ರವಾಗಿದೆ.