ನವದೆಹಲಿ: ಕೊಚ್ಚಿ ಕರಾವಳಿಯಲ್ಲಿ 35 ನಾಟಿಕಲ್ ಮೈಲುಗಳ ದೂರದಲ್ಲಿ ಸಿಲುಕಿದ್ದ 12 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿರುವುದಾಗಿ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಹೇಳಿದೆ.
ಭಾನುವಾರ ರಾತ್ರಿ ಮೀನುಗಾರಿಕೆಯ ದೋಣಿ 'ಜೀಸಸ್' ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಐಸಿಜಿಯ ಹಡಗು ದೋಣಿಯನ್ನು ಮತ್ತು ಅದರಲ್ಲಿದ್ದವರನ್ನು ರಕ್ಷಿಸಿದೆ. ಎಲ್ಲರೂ ಸುರಕ್ಷಿತವಾಗಿದ್ದು ಆರೋಗ್ಯದಿಂದ ಇದ್ದಾರೆ ಎಂದು ಐಸಿಜಿಯ ಟ್ವಿಟರ್‌ನಲ್ಲಿ ಹೇಳಲಾಗಿದೆ.
ತೌತೆ ಚಂಡಮಾರುತವು ತೀವ್ರ ಸ್ವರೂಪ ಪಡೆಯುವ ಬಗ್ಗೆ ಹವಾಮಾನ ಇಲಾಖೆ ಈ ಮೊದಲು ನಿರೀಕ್ಷಿಸಿರಲಿಲ್ಲ ಎನ್ನಲಾಗಿದೆ.