ತಿರುವನಂತಪುರ: ಈ ಬಾರಿಯೂ ಸಚಿವರುಗಳಿಗೆ ನೀಡಲಾಗುವ ಕಾರುಗಳ ಪೈಕಿ 13 ನೇ ಸಂಖ್ಯೆಯ ಕಾರು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. 13 ನೇ ಸಂಖ್ಯೆ ಅಶುಭ ಎಂಬ ಕಾರಣದಿಂದ ಆ ಕಾರಿನ ಊಸಾಬರಿಗೆ ಯಾರೂ ಮುಂದಾಗುತ್ತಿಲ್ಲ. ನಿನ್ನೆ ಪ್ರಮಾಣ ವಚನದ ಬಳಿಕ ಸಚಿವ ಜಿಆರ್ ಅನಿಲ್ ಅವರಿಗೆ ಕಾರು ಸಂಖ್ಯೆ 13 ನೀಡಲಾಯಿತು. ಆದರೆ ಅವರು ಕಾರನ್ನೇರಲು ಹಿಂದೇಟು ಹಾಕಿರುವುದಾಗಿ ತಿಳಿದುಬಂದಿದೆ.
ಕಳೆದ ಬಾರಿಯೂ ಇದೇ ರೀತಿಯ ಪರಿಸ್ಥಿತಿ ಇತ್ತು. 13 ನೇ ಸಂಖ್ಯೆಯ ಕಾರನ್ನು ಅಂತಿಮವಾಗಿ ಆಗಿನ ಹಣಕಾಸು ಮಂತ್ರಿಯಾಗಿದ್ದ ಥಾಮಸ್ ಐಸಾಕ್ ಆಯ್ಕೆ ಮಾಡಿದರು.
ಈ ಕಾರನ್ನು ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ನೀಡಿದೆ. ಈ ಬಾರಿಯೂ ಸಚಿವರು ಹದಿಮೂರು ಸಂಖ್ಯೆಯ ಕಾರು ಬಳಸಲು ಸಿದ್ಧರಿರಲಿಲ್ಲ. ಅಂತಿಮವಾಗಿ ಅತಿಥಿ ಗೃಹದಿಂದ ಬೇರೊಂದು ಕಾರನ್ನು ಕರೆಸಿ ಸಚಿವರನ್ನು ಕರೆದೊಯ್ಯಲಾಯಿತು.
ಕಳೆದ ಸರ್ಕಾರದ ಅವಧಿಯಲ್ಲಿ, ಹನ್ನೆರಡು ಸಂಖ್ಯೆಯ ನಂತರ ಹದಿನಾಲ್ಕು ಸಂಖ್ಯೆಯ ಕಾರು ಬಳಸಲಾಗುತ್ತಿತ್ತು. 2011 ರಲ್ಲಿ, ಯುಡಿಎಫ್ ಸರ್ಕಾರದ ಅವಧಿಯಲ್ಲೂ, 13 ಸಂಖ್ಯೆಯ ಕಾರನ್ನು ಬಳಸುವವರಿರಲಿಲ್ಲ.
ಸಂಖ್ಯೆ 3 ರೋಶಿ ಅಗಸ್ಟೀನ್, ನಾಲ್ಕು ಎ.ಕೆ.ಶಶೀಂದ್ರನ್ ಮತ್ತು ಐದು ವಿ ಶಿವಂಕುಟ್ಟಿ. ಕೆ.ಎನ್. ಬಾಲಗೋಪಾಲ್ ಅವರಿಗೆ ಸಂಖ್ಯೆ 10ರ ಕಾರು ನೀಡಲಾಗಿದೆ. ಪಿ ರಾಜೀವ್ ಅವರಿಗೆ 11, ಕೆ. ರಾಧಾಕೃಷ್ಣನ್ 6, ಅಹ್ಮದ್ ದೇವರ್ಕೋವಿಲ್ 7, ಆಂಟನಿ ರಾಜು 9, ವಿ.ಎನ್.ವಾಸವನ್ 12, ಪಿ ಪ್ರಸಾದ್ 15, ಸಾಜಿ ಚೆರಿಯಾನ್ 16, ಪ್ರೊ.ಆರ್.ಬಿಂದು ಅವರಿಗೆ ಸಂಖ್ಯೆ 19, ಸಂಖ್ಯೆ 20 ವೀಣಾ ಜೋರ್ಜ್, ಸಂಖ್ಯೆ 22 ನ್ನು ಚಿಂಚುರಾಣಿ ಸಂಖ್ಯೆ 14 ನ್ನು ಮುಹಮ್ಮದ್ ರಿಯಾಜ್ ಅವರಿಗೆ ನೀಡಲಾಗಿದೆ.