ತಿರುವನಂತಪುರ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸಂಭವಿಸುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಮೇ.14 ರ ಬೆಳಿಗ್ಗೆ ಕಡಿಮೆ ಒತ್ತಡದ ವಾಯುಭಾರ ಕುಸಿತ ನಿರೀಕ್ಷಿಸಲಾಗಿದೆ. ಲಕ್ಷದ್ವೀಪ ಬಳಿ ಉತ್ತರ-ಪಶ್ಚಿಮ ವಲಯದಲ್ಲಿ ಕಡಿಮೆ ಒತ್ತಡವು ಮೇ.16 ರ ಹೊತ್ತಿಗೆ ಮೊದಲ ಚಂಡಮಾರುತವಾಗಿ ರೂಪುತಳೆಯಲಿದೆ. ಕೇರಳದಲ್ಲಿ 14 ರಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳವು ಪ್ರಸ್ತುತ ಕಡಿಮೆ ಒತ್ತಡದ ಪಥದಲ್ಲಿಲ್ಲ. ಆದರೆ, ಇಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗುವ ಸಾಧ್ಯತೆಯಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಪ್ರತಿಕೂಲ ಹವಾಮಾನ ಮತ್ತು ಪ್ರಬಲ ಗಾಳಿಯಿಂದಾಗಿ ಮುಂದಿನ ಸೂಚನೆ ಬರುವವರೆಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‍ಡಿಎಂಎ) ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೆ ಸಂಪೂರ್ಣ ನಿಷೇಧವನ್ನು ಘೋಷಿಸಿದೆ. ಪ್ರಸ್ತುತ ಆಳ ಸಮುದ್ರದಲ್ಲಿ ಮೀನು ಹಿಡಿಯುತ್ತಿರುವವರು ಸಂಜೆ 14 ಗಂಟೆಯ ಮೊದಲು ಹತ್ತಿರದ ಸುರಕ್ಷಿತ ತೀರಕ್ಕೆ ತೆರಳಲು ಸೂಚಿಸಲಾಗಿದೆ. ಮೀನುಗಾರಿಕೆಗೆ ಹೋದವರಿಗೆ ಈ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚಿಸಿದೆ.