ನವದೆಹಲಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ತೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಹವಾಮಾನ ಸ್ಥಿತಿಯಿಂದ ವಾಯುಭಾರ ಕುಸಿತ ಕಂಡಿದ್ದು, ಶನಿವಾರ ಮೇ.15 ರಂದು ಬೆಳಿಗ್ಗೆಯಿಂದ ತೌಕ್ಟೇ ಚಂಡಮಾರುತ ತೀವ್ರಗೊಳ್ಳಲಿದೆ. ಮೇ.16-19 ವರೆಗೆ ಪ್ರತಿ ಗಂಟೆಗೆ 150-160 ರಿಂದ ಪ್ರಾರಂಭಿಸಿ 175 ಕಿ.ವೇಗದಲ್ಲಿ ಈ ಚಂಡಮಾರುತ ಸಂಚರಿಸಲಿದೆ.
ಗುಜರಾತ್ ನ ಕಡಲ ತೀರವನ್ನು ಮೇ.18 ಕ್ಕೆ ತಲುಪಲಿದ್ದು, ಐಎಂಡಿ ಎಚ್ಚರಿಕೆ ನೀಡಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಕೇರಳ ಕಡಲ ತೀರ ಪ್ರದೇಶ ಸಹಿತ ಒಳನಾಡುಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ತೀವ್ರ ಮಳೆ ಸುರಿಯುತ್ತಿದ್ದು, ಶನಿವಾರವೂ ಮುಂದುವರಿದಿದೆ. ಕೊಂಕಣ, ಗೋವಾ, ಗುಜರಾತ್ ನ ಸೌರಾಷ್ಟ್ರ ಜಿಲ್ಲೆಗಳಲ್ಲೂ ಮಳೆಯಾಗಲಿವೆ. ಈ ಚಂಡಮಾರುತಕ್ಕೆ ತೌಕ್ಟೇ ಎಂಬ ಹೆಸರನ್ನು ಮ್ಯಾನ್ಮಾರ್ ನೀಡುದ್ದು ಇದಕ್ಕೆ ಗೆಕ್ಕೊ (ಹಲ್ಲಿ ಎಂಬ ಅರ್ಥ) ಭಾರತದಲ್ಲಿ ಇದು ಈ ವರ್ಷದ ಮೊದಲ ಚಂಡಮಾರುತವಾಗಿರಲಿದೆ.