ತಿರುವನಂತಪುರ: ತುರ್ತು ಸಂದರ್ಭಗಳಲ್ಲಿ ಮಾತ್ರ ಪೋಲೀಸರ ಆನ್‍ಲೈನ್ ಇ-ಪಾಸ್ ಗೆ ಅರ್ಜಿ ಸಲ್ಲಿಸಬೇಕೆಂದು ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಮನವಿ ಮಾಡಿದ್ದಾರೆ. ಭಾನುವಾರ ಸಂಜೆ 7 ರ ವೇಳೆಗೆ ರಾಜ್ಯಾದ್ಯಂತ 1,75,125 ಮಂದಿ ಜನರು ಪೋಲೀಸ್ ಇ-ಪಾಸ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15,761 ಮಂದಿ ಜನರಿಗೆ ಪ್ರಯಾಣ ಪರವಾನಗಿ ನೀಡಲಾಗಿದೆ. 81,797 ಜನರಿಗೆ ಅನುಮತಿ ನಿರಾಕರಿಸಲಾಗಿದೆ.
ಈ ಪೈಕಿ 77,567 ಅರ್ಜಿಗಳು ಪರಿಗಣನೆಯಲ್ಲಿವೆ. ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ವಿಶೇಷ ಶಾಖಾ ಅಧಿಕಾರಿಗಳನ್ನು ದಿನದ 24 ಗಂಟೆಗಳ ಕಾಲ ನಿಯೋಜಿಸಲಾಗಿದೆ ಎಂದು ಬೆಹ್ರಾ ತಿಳಿಸಿದ್ದಾರೆ. ಇಂದಿನಿಂದ(ಸೋಮವಾರ) ಲಾಕ್‍ಡೌನ್ ನಿರ್ಬಂಧಗಳು ಮತ್ತು ತಪಾಸಣೆಗಳನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ ಎಂದರು ಭಾನುವಾರ ತಿಳಿಸಿದ್ದಾರೆ.
ಅರ್ಜಿದಾರನು ಮಾನ್ಯತೆಯ ಗುರುತಿನ ಚೀಟಿ ಹೊಂದಿದ್ದರೆ ಬೇರೆ ಪಾಸ್ ಅಗತ್ಯವಿಲ್ಲ. ಪಾಸ್ ಗೆ ಉದ್ಯೋಗದಾತರು ಗೃಹ ಕಾರ್ಮಿಕರು ಮತ್ತು ಗೃಹ ದಾದಿಯರು(ಕೂಲಿ ಕೆಲಸಗಾರರು ಮತ್ತು ಹೋಂ ನರ್ಸ್) ಸೇರಿದಂತೆ ಕಾರ್ಮಿಕರ ಪರವಾನಿಗೆಗೆ ಅರ್ಜಿ ಸಲ್ಲಿಸಬಹುದು. ಔಷಧಿ ಮತ್ತು ಆಹಾರ ಖರೀದಿಯಂತಹ ಹೆಚ್ಚಿನ ಅಗತ್ಯ ವಿಷಯಗಳಿಗೆ ಅಫಿಡವಿಟ್ ಸಾಕು. ಆದರೆ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ತಿಳಿಸಿರುವರು.
ಪ್ರಯಾಣ ಮಾಡುವಾಗ ಗುರುತಿನ ಚೀಟಿ ಕೊಂಡೊಯ್ಯುವಂತೆ ಪೋಲೀಸರು ಸರ್ಕಾರಿ ನೌಕರರಿಗೆ ಸಲಹೆ ನೀಡಿರುವರು.