ತಿರುವನಂತಪುರ: ರಾಜ್ಯದಲ್ಲಿ 18 ರಿಂದ 45 ವರ್ಷ ವಯಸ್ಸಿನವರಿಗೆ ಕೊರೋನಾ ಲಸಿಕೆ ನೀಡಲು ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ 32 ವಿಭಾಗಗಳಿಗೆ ಆದ್ಯತೆ ನೀಡಲಾಗುತ್ತದೆ.
ಈ ಪಟ್ಟಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಚಾಲಕರು, ಕಂಡಕ್ಟರ್‍ಗಳು, ಪೆಟ್ರೋಲ್ ಪಂಪ್ ಉದ್ಯೋಗಿಗಳು, ಪತ್ರಿಕಾ ವಿತರಕರು, ಅಂಗವಿಕಲರು, ಪತ್ರಕರ್ತರು, ಕೆ.ಎಸ್.ಇ.ಬಿ. ಸಿಬ್ಬಂದಿ, ಜಲ ಪ್ರಾಧಿಕಾರ ಸಿಬ್ಬಂದಿ, ರೈಲ್ವೆ ಟಿಟಿಇಗಳು, ಚಾಲಕರು, ವಿಮಾನ ನಿಲ್ದಾಣದ ಸಿಬ್ಬಂದಿ, ಮೀನುಗಾರಿಕೆ ಮತ್ತು ತರಕಾರಿ ಮಾರಾಟಗಾರರು ಸೇರಿದ್ದಾರೆ.