ನವದೆಹಲಿ: ಕೋವಿಡ್-19 ನಿಂದಾಗಿ ಈ ವರೆಗೂ 577 ಮಕ್ಕಳು ಅನಾಥರಾಗಿದ್ದಾರೆ, ಅವರು ಕುಟುಂಬದ ಇತರ ಸದಸ್ಯರೊಂದಿಗೆ ಇದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.
ಪೋಷಕರನ್ನು ಕಳೆದುಕೊಂಡ ಮಕ್ಕಳನ್ನೂ ಯಾರೂ ಬಿಟ್ಟಿಲ್ಲ, ಜಿಲ್ಲಾ ಅಧಿಕಾರಿಗಳ ರಕ್ಷಣೆಯಲ್ಲಿ, ಕುಟುಂಬ ಸದಸ್ಯರೊಂದಿಗೆ ಮಕ್ಕಳು ಇದ್ದಾರೆ, ಈ ರೀತಿಯ ಪರಿಸ್ಥಿತಿ ಎದುರಿಸುತ್ತಿರುವ ಮಕ್ಕಳಿಗೆ ನಿಮ್ಹಾನ್ಸ್ ಆಪ್ತ ಸಮಾಲೋಚನೆ ನೀಡಲು ಸಿದ್ಧವಿದೆ.
ಈ ಮಕ್ಕಳ ಕಲ್ಯಾಣಾಭಿವೃದ್ಧಿಗೆ ಅನುದಾನದ ಕೊರತೆಗಳಿಲ್ಲ, ಈ ಮಕ್ಕಳ ಕಾಳಜಿಯ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಜಿಲ್ಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.