ತಿರುವನಂತಪುರ: ರಾಜ್ಯದಲ್ಲಿ ಇಂದು 19,894 ಮಂದಿ ಜನರಿಗೆ ಕೋವಿಡ್ ಪತ್ತೆಯಾಗಿದೆ. ಮಲಪ್ಪುರಂ 3015, ತಿರುವನಂತಪುರ 2423, ತ್ರಿಶೂರ್ 2034, ಎರ್ನಾಕುಳಂ 1977, ಪಾಲಕ್ಕಾಡ್ 1970, ಕೊಲ್ಲಂ 1841, ಆಲಪ್ಪುಳ 1530, ಕೋಝಿಕೋಡ್ 1306, ಕಣ್ಣೂರು 991, ಕೊಟ್ಟಾಯಂ 834, ಇಡುಕ್ಕಿ 675, ಕಾಸರಗೋಡು 532, ಪತ್ತನಂತಿಟ್ಟು 517, ವಯನಾಡ್ 249 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,24,537 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 15.97 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,97,06,583 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗ|ಊ ಕೋವಿಡ್ ಖಚಿತಪಡಿಸಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 126 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 125 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಮಂದಿ ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಇಂದು,ಕೋವಿಡ್ ಬಾಧಿಸಿ 186 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 8641 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 156 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 18,571 ಮಂದಿ ಜನರಿಗೆ ಸೋಂಕು ತಗುಲಿತು. 1083 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2845, ತಿರುವನಂತಪುರ 2232, ತ್ರಿಶೂರ್ 2013, ಎರ್ನಾಕುಳಂ 1919, ಪಾಲಕ್ಕಾಡ್ 1353, ಕೊಲ್ಲಂ 1834, ಆಲಪ್ಪುಳ 1522, ಕೋಝಿಕೋಡ್ 1287, ಕಣ್ಣೂರು 877, ಕೊಟ್ಟಾಯಂ 793, ಇಡುಕ್ಕಿ 648, ಕಾಸರಗೋಡು 514, ಪತ್ತನಂತಿಟ್ಟು 500, ವಯನಾಡ್ 234 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಸೋಂಕು 84 ಮಂದಿ ಆರೋಗ್ಯ ಕಾರ್ಯಕರ್ತರಿಗೆ ದೃಢಪಡಿಸಲಾಗಿದೆ. ಕಣ್ಣೂರು 19, ಕಾಸರಗೋಡು 16, ಎರ್ನಾಕುಳಂ, ತ್ರಿಶೂರ್ ತಲಾ 11, ಕೊಲ್ಲಂ, ಪಾಲಕ್ಕಾಡ್ ತಲಾ 7, ಪತ್ತನಂತಿಟ್ಟು, ಮಲಪ್ಪುರಂ ತಲಾ 4, ವಯನಾಡ್ 3 ಮತ್ತು ತಿರುವನಂತಪುರ 2 ಎಂಬಂತೆ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 29,013 ಮಂದಿ ಜನರು ಗುಣಮುಖರಾಗಿರುವರು. ತಿರುವನಂತಪುರ 2983, ಕೊಲ್ಲಂ 2579, ಪತ್ತನಂತಿಟ್ಟು 1113, ಆಲಪ್ಪುಳ 2333, ಕೊಟ್ಟಾಯಂ 1278, ಇಡುಕ್ಕಿ 986, ಎರ್ನಾಕುಳಂ 3439, ತ್ರಿಶೂರ್ 2403, ಪಾಲಕ್ಕಾಡ್ 2730, ಮಲಪ್ಪುರಂ 4131, ಕೋಝಿಕ್ಕೋಡ್ 2669, ವಯನಾಡ್ 213, ಕಣ್ಣೂರು 1537, ಕಾಸರಗೋಡು 619 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ ಒಟ್ಟು 2,23,727 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 22,81,518 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 8,19,417 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,80,842 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 38,575 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 3366 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 8 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 887 ಹಾಟ್‍ಸ್ಪಾಟ್‍ಗಳಿವೆ.