ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ಸ್-ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ (ಸವಾಕ್) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕಲಾವಿದರಿಗೆ "ಕೋವಿಡ್ 19"ಸಾಂತ್ವನ ಕಿಟ್ ವಿತರಣೆಯು ಭಾನುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದುಮ ಶಾಸಕ ನ್ಯಾಯವಾದಿ ಸಿ.ಎಚ್ ಕುಞಂಬು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಹಾಗೂ ಸವಾಕ್ ಜಿಲ್ಲಾ ಅಧ್ಯಕ್ಷರಾದ ಉಮೇಶ್. ಎಂ. ಸಾಲಿಯಾನ್ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಾಶಂಸನೆಗೈದರು.
ಸವಾಕ್ ಜಿಲ್ಲಾ ಪದಾಧಿಕಾರಿಗಳಾದ ಭಾರತಿ ಬಾಬು, ದಿವಾಕರ ಅಶೋಕನಗರ, ಜ್ಯೋತಿ ಲಕ್ಷ್ಮಿ, ನರೇಂದ್ರ, ಬ್ಲಾಕ್ ಸಮಿತಿ ಅಧ್ಯಕ್ಷರಾದ ದಯಾಪ್ರಸಾದ್, ಮಧುಸೂದನ ಬಲ್ಲಾಳ್, ಎಂ.ಎಂ.ಗಂಗಾಧರನ್, ಹಿರಿಯ ಕಲಾವಿದ ನರಸಿಂಹ ಬಲ್ಲಾಳ್, ಚನಿಯಪ್ಪ ನಾಯ್ಕ್, ಉಪೇಂದ್ರ ಭಟ್ ಮುಂತಾದವರು ಶುಭಾಶಂಸನೆಗೈದರು. ಕಾಸರಗೋಡು ಬ್ಲಾಕ್ ಹಾಗೂ ಇತರ ಬ್ಲಾಕ್ ಗಳ ಸದಸ್ಯರಿಗೆ ಕಿಟ್ ವಿತರಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಸನ್ನಿ ಆಗಸ್ಟಿನ್ ಸ್ವಾಗತಿಸಿ, ಖಜಾಂಚಿ ಚಂದ್ರಹಾಸ ಕಯ್ಯಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಬ್ಲಾಕ್ ಸದಸ್ಯರು ಭಾಗವಹಿಸಿದ್ದರು.