ನವದೆಹಲಿ: ಎಸ್‌ಬಿಐ ಎಟಿಎಂಗಳಿಂದ ಹಣ ಹಿಂಪಡೆಯುವ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಲಾಗಿದೆ. ಮೂಲ ಉಳಿತಾಯ ಖಾತೆದಾರರು ಎಟಿಎಂಗಳಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣವನ್ನು ಹಿಂಪಡೆಯಬಹುದು.
ಬಳಿಕ ಪ್ರತಿ ಬಾರಿ ಹಣ ಹಿಂಪಡೆಯುವಾಗ 15 ರೂ.ಜೋತೆಗೆ ಜಿ.ಎಸ್.ಟಿ.ಶುಲ್ಕ ಪಾವತಿಯಾಗುತ್ತದೆ. ಹೊಸ ಬದಲಾವಣೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತಿಳಿಸಿದೆ.
ಮೂಲ ಉಳಿತಾಯ ಠೇವಣಿ ಖಾತೆದಾರರಿಗೆ ಚೆಕ್ ಬುಕ್ ಶುಲ್ಕವನ್ನು ಸಹ ಎಸ್‌ಬಿಐ ಬದಲಾಯಿಸಿದೆ. ಪ್ರಸ್ತುತ 10 ಪುಟಗಳ ಚೆಕ್ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ.ಆ ಬಳಿಕ ಹೆಚ್ಚುವರಿ 10 ಪುಟಗಳ ಪಾಸ್ ಬುಕ್ ಬೇಕಿದ್ದರೆ 40 ರೂ ಮತ್ತು 25 ಪುಟಗಳು ಬೇಕಿದ್ದರೆ 75 ರೂ. ಪಾವತಿಸಬೇಕಾಗುತ್ತದೆ. ತಕ್ಷಣ ಚೆಕ್ ಪುಸ್ತಕವನ್ನು ಪಡೆಯಲು ಬಯಸಿದರೆ, ನೀವು 50 ರೂ.ಪಾವತಿಸಬೇಕು.
ಭಾರತದಲ್ಲೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2.5 ಲಕ್ಷ ರೂ.ಗಳ ದ್ವಿಚಕ್ರ ವಾಹನ ಸಾಲ ಮತ್ತು ಆ್ಯಪ್‌ನ ಹೊರತು 20 ಲಕ್ಷ ರೂ.ವರೆಗಿನ ಎಕ್ಸ್ ಪ್ರೆಸ್ ಕ್ರೆಡಿಟ್ ಸಾಲ ನೀಡುವ ವಾಗ್ದಾನ ನೀಡಿದೆ.ಬಿಸಿನೆಸ್ ಟ್ರೇಡ್ ನಿಯಮಾನುಸಾರ ಡಿಜಿಟಲ್ ಬ್ಯಾಂಕಿಂಗ್ ಮೊಬೈಲ್ ಅಪ್ಲಿಕೇಶನ್‌ನ ಎಸ್‌ಬಿಐ ಯೋನೊ ಆ್ಯಪ್ ಮೂಲಕ ದ್ವಿಚಕ್ರ ವಾಹನಗಳನ್ನು ಈಗ ಸುಲಭವಾಗಿ ಪಡೆಯಬಹುದು.