ಕಾಸರಗೋಡು: ಮುಗ್ಗಟ್ಟಿನ ಈ ಅವಧಿಯಲ್ಲೂ, ನಿರೀಕ್ಷೆಯ ಆಶಾಕಿರಣದೊಂದಿಗೆ ಜೂ.1ರಂದು ವಿಶ್ವ ಹಾಲು ಅಭಿವೃದ್ಧಿ ದಿನಾಚರಣೆ ನಡೆಯಲಿದೆ.
ಕೋವಿಡ್ ಮಹಾಮಾರಿಯ ಪರಿಣಾಮ ಹಾಲು ಸಂಗ್ರಹ ಮತ್ತು ಮಾರಾಟ ವಲಯಗಳು ಸಂಕಷ್ಟ ಅನುಭವಿಸಿದರೂ, ಸರಕಾರದ ಸಂದರ್ಭೋಚಿತ ಕ್ರಮಗಳ ಪರಿಣಾಮ ಗ್ರಾಹಕರಿಗೆ ಕೊರತೆಯಿಲ್ಲದೆ ಹಾಲು ಮತ್ತು ಹಾಲು ಉತ್ಪನ್ನಗಳು ಲಭಿಸುತ್ತಿವೆ. ಹಾಲು ಉತ್ಪಾದಕರಿಗೆ ಗೌರವ ಸೂಚಿಸುವ ಸಲುವಾಗಿ ರಾಜ್ಯದಲ್ಲಿ ಹಾಲು ಅಭಿವೃದ್ಧಿ ದಿನ ಆಚರಿಸಲಾಗುತ್ತಿದೆ.
ಜೂ.1ರಂದು ಮಧ್ಯಾಹ್ನ 2 ಗಂಟೆಗೆ ರಾಜ್ಯ ಮಟ್ಟದ ಹಾಲು ಅಭಿವೃದ್ಧಿ ದಿನಾಚರಣೆ ಉದ್ಘಾಟನೆಗೊಳ್ಳಲಿದೆ. ಇಲಾಖೆ ಸಚಿವೆ ಚಿಂಚುರಾಣಿ ಉದ್ಘಾಟಿಸುವರು. ಎಲ್ಲ ಹಾಲು ಉತ್ಪಾದಕ ಸಂಘಗಳಲ್ಲೂ, ಎಲ್ಲ ಕಚೇರಿಗಳಲ್ಲೂ ಕೋವಿಡ್ ಕಟ್ಟುನಿಟ್ಟು ಪಾಲಿಸಿ ಹಾಲು ಅಭಿವೃದ್ಧಿ ದಿನಾಚರಣೆ ನಡೆಯಲಿದೆ.
ಇಲಾಖೆ ಸಚಿವೆಯೊಂದಿಗೆ ಹಾಲು ಉತ್ಪಾದಕರು ಮತ್ತು ಸಾರ್ವಜನಿಕರು http://www.facebook.com/
......