HEALTH TIPS

ಹಾಡು, ಕಥೆಗಳೊಂದಿಗೆ ಮಕ್ಕಳು ಸಿದ್ಧ: ಜೂ.1ರಂದು ಶಾಲಾ ಪ್ರವೇಶೋತ್ಸವ ಮನೆಗಳಿಂದಲೇ : ಪ್ರವೇಶೋತ್ಸವ ಸ್ಮರಣಾರ್ಥ ಮಕ್ಕಳು ನೆಡಲಿದ್ದಾರೆ "ನೆನಪಿನ ಮರ"

          ಕಾಸರಗೋಡು: ಅಕ್ಷರ ಲೋಕಕ್ಕೆ ಪುಟಾಣಿ ಕಾಲುಗಳು ಪ್ರವೇಶಿಸುವ ಪ್ರಕ್ರಿಯೆಯಯನ್ನು ಉತ್ಸವವಾಗಿಸುವ ನಿಟ್ಟಿನಲ್ಲಿ ನಡೆಯುವ ಶಾಲಾ ಪ್ರವೇಶೋತ್ಸಕ್ಕೆ ಈ ಬಾರಿಯೂ ಮೊಟಕಿಲ್ಲ.... 

                  ಜೂ.1ರಂದು ಶಾಲಾ ಪ್ರವೇಶೋತ್ಸವ ಸಮಾರಂಭ ನಡೆಯುವುದು. ಹೊಸಬಟ್ಟೆ ತೊಟ್ಟು, ನಗುನಗುತ್ತಾ ಪೆÇೀಷಕರೊಂದಿಗೆ ಮಕ್ಕಳು ಶಾಲೆಗಳಿಗೆ ಪ್ರವೇಶಾತಿ ಪಡೆಯಬೇಕು ಎಂಬ ಸಂಕಲ್ಪದೊಂದಿಗೆ ಪ್ರತಿ ವರ್ಷ ನಡೆಸಲಾಗುವ ಪ್ರವೇಶೋತ್ಸವ ಕೊರೋನಾ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಕಾರಣ ಈ ಬಾರಿ ಶಾಲೆಗಳಲ್ಲಿ ನಡೆಯದೇ, ಅವರವರ ಮನೆಗಳಿಂದಲೇ ಆಚರಿಸುವ ವ್ಯವಸ್ಥೆ ಮಾಡಲಾಗಿದೆ. ಪುಟಾಣಿಗಳಿಗೆ ಮನೆಗಳೇ ಒಂದನೇ ತರಗತಿಗಳಾಗಿ ಮಾರ್ಪಡಲಿವೆ. ಜೊತೆಗೆ ಪ್ರವೇಶೋತ್ಸವ ಅಂಗವಾಗಿ ಹಿತ್ತಿಲಲ್ಲೇ ಮರವಾಗಿ ಬೆಳೆಯಬಲ್ಲ ಸಸಿಯೊಂದನ್ನು ನೆಡಲಾಗುವುದು. ಇದಕ್ಕೆ "ನೆನಪಿನ ಮರ" ಎಂದು ಹೆಸರಿಸಲಾಗುವುದು. 

          "ನಮ್ಮ ನಾಳೆಗಳು ಪ್ರಕೃತಿ ಸಂರಕ್ಷಣೆಯೊಂದಿಗೆ " ಎಂಬ ಸಂಕಲ್ಪವನ್ನು ಶಾಲಾ ಪ್ರವೇಶೋತ್ಸವದ ಹಂತದಲ್ಲೇ ದೃಡೀಕರಿಸುವ ಮತ್ತು ಈ ಮೂಲಕ ಕೊರೋನಾದಂಥಾ ಮಹಾಮಾರಿಯನ್ನು ಜಾಗೃತಿಯಿಂದ ನಿಯಂತ್ರಿಸುವ ಉದ್ದೇಶವನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸುವ ಲಕ್ಷ್ಯದೊಂದಿಗೆ ವಿಭಿನ್ನವಾಗಿ ಈ ಬಾರಿ ಈ ಸಮಾರಂಭ ಜರುಗಲಿದೆ. 

              "ನೆನಪಿನ ಮರ" ನೆಡುವ ಯೋಜನೆ ಈ ಬಾರಿಯ ಶಾಲಾ ಪ್ರವೇಶೋತ್ಸವದ ಗಮನಾರ್ಹ ಕಾರ್ಯಕ್ರಮವಾಗಿದೆ. ಮೊದಲ ಶಾಲಾ ಕಲಿಕೆಯ ನೆನಪಿನಲ್ಲಿ ಅಂಗನವಾಡಿ ಮಕ್ಕಳು ತಮ್ಮ ಒಂದನೇ ತರಗತಿ ಪ್ರವೇಶಿಸುವ ವೇಳೆ ತಮ್ಮ ಹಿತ್ತಿಲಲ್ಲೇ ಸಸಿ ನೆಡುವರು. ಇದರ ಚಿತ್ರ ಕ್ಲಿಕ್ಕಿಸಿ ಸಂಬಂಧಪಟ್ಟವರಿಗೆ ಕಳುಹಿಸುವಂತೆ ಆದೇಶಿಸಲಾಗಿದೆ. 

                  ರಾಜ್ಯ ಮಟ್ಟದಲ್ಲಿ, ಶಾಲಾ ಮಟ್ಟದಲ್ಲಿ, ತರಗತಿ ಮಟ್ಟದಲ್ಲಿ, ಮನೆಗಳ ಮಟ್ಟದಲ್ಲಿ ಶಾಲಾ ಪ್ರವೇಶೋತ್ಸವ ನಡೆಯಲಿರುವುದೂ ಈ ಬಾರಿಯ ಇನ್ನೊಂದು ವಿಶೇಷತೆ. ರಾಜ್ಯ ಮಟ್ಟದ ಶಾಲಾ ಪ್ರವೇಶೀತ್ಸವವನ್ನು ಕೈಟ್ ವಿಕ್ಟರ್ಸ್ ಚಾನೆಲ್ ನೇರ ಪ್ರಸಾರ ನಡೆಸಲಿದೆ. ಎಲ್ಲ ಶಾಕೆಗಳಿಗೆ ಮತ್ತು ಮಕ್ಕಳಿಗೆ ಇದನ್ನು ವೀಕ್ಷಿಸುವ ಸೌಲಭ್ಯ ಒದಗಿಸಲಾಗುವುದು. ಜೂ.1ರಂದು ಬೆಳಗ್ಗೆ 9.30ಕ್ಕೆ ಉಪಜಿಲ್ಲಾ ಮಟ್ಟದ/ ಶಾಲಾ ಮಟ್ಟದ ಉದ್ಘಾಟನೆಗಳ ನಂತರ ಬೆಳಗ್ಗೆ 11 ಗಂಟೆಗೆ ತರಗತಿ ಮಟ್ಟದ ಉದ್ಘಾಟನೆ ಜರುಗಲಿವೆ. ಗೂಗಲ್ ಮಿಟ್, ಝೂಂ, ವಾಟ್ಸ್ ಆಪ್  ವ್ಯವಸ್ಥೆಗಳ ಮೂಲಕ ಪ್ರತಿ ತರಗತಿಯ  ಗುಂಪುಗಳಲ್ಲಿ ಪ್ರವೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ. 


             ಕಿರಿಯ ಶಾಲೆಗಳಲ್ಲಿ ಶಾಲಾ ಮಟ್ಟದ ಪ್ರವೇಶೋತ್ಸವ, ದೊಡ್ಡ ಶಾಲೆಗಳಲ್ಲಿ ತರಗತಿ ಮಟ್ಟದ ಪ್ರವೇಶೋತ್ಸವ ನಡೆಯಲಿವೆ. ಪೆÇೀಷಕರು, ಮಕ್ಕಳು, ಶಿಕ್ಷಕರು ಮೊದಲಾದವರ ಪರಸ್ಪರ ಪರಿಚಯ ಮಡಿಕೊಳ್ಳುವಿಕೆ, ಮಕ್ಕಳಿಂದ ಕಲಾಕಾರ್ಯಕ್ರಮಗಳು, ಕೋವಿಡ್ ಅವಧಿಯ ತಮ್ಮ ಅನುಭವಗಳು, ಹಿರಿಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಇತ್ಯಾದಿಗಳು ಪ್ರವೇಶೋತ್ಸವ ಸಂಬಂಧ ಜರುಗಲಿವೆ. ಮೊದಲೇ ರೆಕಾರ್ಡ್ ನಡೆಸಿದ ಯಾ ನೇರಪ್ರಸಾರ ಮೂಲಕ ಕಲಾಕಾರ್ಯಕ್ರಮ ಪ್ರಸಾರಗೊಳ್ಳಲಿವೆ. ಈ ಹಿಮದಿನ ವರ್ಷಗಳ ಸಾಧನೆಗಳನ್ನು ಅಳವಡಿಸಿದ ವೀಡಿಯೋ ಪ್ರದರ್ಶನವೂ ಪ್ರವೇಶೋತ್ಸವ ಅಂಗವಾಗಿ ನಡೆಯಲಿವೆ. ಪ್ರಥಮ ತರಗತಿಗೆ ಸೇರುತ್ತಿರುವ ಮಕ್ಕಳಿಗೆ ಮುಖ್ಯಮಂತ್ರಿಯ ವಿಡಿಯೋ ಸಂದೇಶ ಶಿಕ್ಷಕರ ಮೂಲಕ ಈಗಾಗಲೇ ತಲಪಿಸಲಾಗಿದೆ. ಅಂಗನವಾಡಿ ಮತ್ತು ಒಂದನೇ ತರಗತಿ ಮಕ್ಕಳನ್ನು ಅವರವರ ಪೆÇೀಷಕರು ಪರಿಚಯಿಸಲಿದ್ದಾರೆ. ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಸಿಹಿ ವಿತರಣೆಯೂ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries