ತಿರುವನಂತಪುರ: ವಾರ್ಷಿಕ ಮಾನ್ಸೂನ್ ಈ ವರ್ಷ ಜೂನ್ 1 ರಂದು ಕೇರಳಕ್ಕೆ ಕಾಲಿಡಲಿದೆ. ಈ ನಿಟ್ಟಿನಲ್ಲಿ ಸೂಚನೆಗಳು ಬಂದಿವೆ ಎಂದು ಕೇಂದ್ರ ಭೂ ಸಚಿವಾಲಯ ತಿಳಿಸಿದೆ. ಇದು ಮೊದಲ ಸೂಚನೆಗಳನ್ನು ಸ್ವೀಕರಿಸಿದೆ ಎಂದು ಸಚಿವಾಲಯ ಟ್ವಿಟ್ಟರ್ನಲ್ಲಿ ತಿಳಿಸಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾನ್ಸೂನ್ ಸಾಮಾನ್ಯವಾಗಲಿದೆ ಎಂದು ಇಲಾಖೆ ಅಧಿಕಾರಿ ರಾಜೀವ್ ಹೇಳಿರುವÀರು. ಏಪ್ರಿಲ್ 16 ರಂದು ಕೇಂದ್ರ ಹವಾಮಾನ ಇಲಾಖೆ ಸರಾಸರಿ ಮಳೆಯ ಶೇಕಡಾ 98 ರಷ್ಟು ಮುನ್ಸೂಚನೆ ನೀಡಿದೆ. ಐದು ಪ್ರತಿಶತದವರೆಗೆ ವ್ಯತ್ಯಾಸವಿರಬಹುದು ಎಂದು ರಾಜೀವ್ ಹೇಳಿದರು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ.