HEALTH TIPS

ಕೋವಿಡ್ 2ನೇ ಅಲೆಗೆ ತತ್ತರಿಸಿದ ಮಾಧ್ಯಮ: 300 ಪತ್ರಕರ್ತರು ಬಲಿ: ಬದುಕಿ ಉಳಿದವರ ಸ್ಥಿತಿಯೂ ಶೋಚನೀಯ!

             ನವದೆಹಲಿ:  ಕೊರೊನಾ ವೈರಸ್ ಎರಡನೇ ಅಲೆಗೆ ಎಲ್ಲಾ ಕ್ಷೇತ್ರವೂ ತತ್ತರಿಸಿದ್ದು, ಜನರ ಜೊತೆಗಿರುವ ಮಾಧ್ಯಮ ಕೂಡ ತಲ್ಲಣಿಸಿದ್ದು, 300 ಪತ್ರಕರ್ತರನ್ನು ಇದುವರೆಗೆ ಬಲಿ ಪಡೆದಿದೆ.

         ಕೊರೊನಾ ವೈರಸ್ ಕಾಲಿಟ್ಟಾಗಿನಿಂದ ಪ್ರತಿನಿತ್ಯ ಪತ್ರಕರ್ತರು ಕೊರೊನಾ ಮಹಾಮಾರಿಯಿಂದ ಒಂದಲ್ಲ ಒಂದು ರೀತಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ದೇಶದಲ್ಲಿ 2021ರ ಏಪ್ರಿಲ್ ನಲ್ಲಿ ಪ್ರತಿನಿತ್ಯ ಮೂವರು ಪತ್ರಕರ್ತರು ಬಲಿಯಾಗುತ್ತಿದ್ದರು. ಆದರೆ ಮೇ ತಿಂಗಳಲ್ಲಿ ಈ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕೋವಿಡ್ ಎರಡನೇ ಅಲೆಗೆ ಕೇವಲ ಹಿರಿಯ ಪತ್ರಕರ್ತರು ಮಾತ್ರವಲ್ಲ, ಜಿಲ್ಲಾ ಮಟ್ಟದ ಪತ್ರಕರ್ತರು ಹಾಗೂ ಕ್ಯಾಮರಾಮನ್ ಸೇರಿದಂತೆ ಹಲವರನ್ನು ಬಲಿ ಪಡೆದಿದೆ.

      ದೆಹಲಿ ಮೂಲದ ಇನ್ಸಿಟಿಟ್ಯೂಟ್ ಆಫ್ ಪರ್ಸಪ್ಷನ್ ಸ್ಟಡೀಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಮೇ 16ರ ವೇಳೆಗೆ ದೇಶದಲ್ಲಿ 2020ರ ಏಪ್ರಿಲ್ ನಿಂದ ಮೇ 2021ರ ಅವಧಿಯಲ್ಲಿ ಕೋವಿಡ್ ಗೆ 238 ಪತ್ರಕರ್ತರು ಮೃತಪಟ್ಟಿದ್ದಾರೆ.

        2020ರ ಡಿಸೆಂಬರ್ ನಲ್ಲಿ ಅತೀ ಹೆಚ್ಚು 58 ಮಂದಿ ಪತ್ರಕರ್ತರು ಅಸುನೀಗಿದ್ದರು. ಎರಡನೇ ಅಲೆಗೆ ಕೇವಲ 2 ತಿಂಗಳಲ್ಲಿ 171 ಪತ್ರಕರ್ತರು ಅಸುನೀಗಿದ್ದಾರೆ. ಉಳಿದ 11 ಮಂದಿ ಜನವರಿ ಮತ್ತು ಏಪ್ರಿಲ್ ನಡುವೆ ಮೃತಪಟ್ಟಿದ್ದಾರೆ.

                                                                      

            ಸೋಂಕು ಬಾಧಿಸಿ ಮೃತಪಟ್ಟವರ ವರದಿ ಒಂದೆಡೆಯಾದರೆ, ಇನ್ನೊಂದೆಡೆ ಬದುಕುಳಿದವರ ಸ್ಥಿತಿ ತೀವ್ರ ಶೋಚನೀಯಾವಸ್ಥೆಗೆ ತಲಪಿದೆ. ಪತ್ರಿಕಾ ಸಂಸ್ಥೆಗಳ ಸ್ಥಿರ ಉದ್ಯೋಗಿಗಳಿಗಿಂತ ನಾಲ್ಕುಪಟ್ಟು ಹೆಚ್ಚು ಮಂದಿ ಅರೆಕಾಲಿಕ ಮತ್ತು ಹವ್ಯಾಸಿ ಪತ್ರಕರ್ತರಾಗಿ ದುಡಿಯುತ್ತಿದ್ದು, ದೇಶದಲ್ಲಿ ಕಳೆದ ವರ್ಷ ಕೋವಿಡ್ ಆರಂಭಗೊಂಡಿಂದಿನಿಂದ ಈವರೆಗೂ ನಯಾ ಪೈಸೆ ಸಂಬಳ ಅಥವಾ ಗೌರವ ಧನಗಳನ್ನು ಪಡೆಯದೆ ದಿಕ್ಕೆಟ್ಟ ಪತ್ರಕರ್ತರ, ಜಾಹೀರಾತು ಪ್ರತಿನಿಧಿಗಳ ಮತ್ತು ಕ್ಯಾಮರಾ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ. ಮಾಸವೊಂದಕ್ಕೆ 10 ರಿಂದ 14 ಸಾವಿರ ದಷ್ಟು ಸಂಬಳದಲ್ಲಿ ಬದುಕು ಸವೆಸುತ್ತಿದ್ದ ಇಂತಹ ಪತ್ರಕರ್ತರು ಇದೀಗ ಯಾವುದೇ ಆರ್ಥಿಕ ಬಲವಿಲ್ಲದೆ ಕಂಗಾಲಾಗಿದ್ದಾರೆ.

            ಇತರ ಭಾಷಾ ಮಾಧ್ಯಮಗಳಿಗಿಂತ ಒಂದೆಜ್ಜೆ ಮುಂದೆ ಎಂಬಂತೆ ಕನ್ನಡ ಪತ್ರಿಕೋದ್ಯಮದ ಸಾಮಾನ್ಯ ಪತ್ರಿಕೋದ್ಯಮಿ ಸಂಕಷ್ಟಕ್ಕೊಳಗಾಗಿದ್ದಾರೆ. ಹೇಳಿಕೆಗಷ್ಟೇ ಸೀಮಿತವಾಗಿ ಮಿಕ್ಕುಳಿದಂತೆ ವ್ಯಾಪಾರಿ ವ್ಯವಸ್ಥೆಯಾಗಿ ಬೆಳೆದಿರುವ ಕನ್ನಡ ಪತ್ರಿಕಾ ಕ್ಷೇತ್ರ ಇದೀಗ ರೆವೆನ್ಯೂ ಕೊರತೆದ ಹೆಸರಲ್ಲಿ ಅರೆಕಾಲಿಕ ಪತ್ರಕರ್ತರ ಮೇಲೆ ಭಾರೀ ಪ್ರಹಾರ ನಡೆಸಿದ್ದು, ಸ್ಥಿಳೀಯ ವರದಿಗಾರಿಕೆ ಮೂಲಕ ಹತ್ತೋ, ಹನ್ನಡೆರಡೋ ಸಾವಿರ ದುಡಿದು ಬದುಕು ದೂಡುತ್ತಿರುವವರು ಯಾವೊಂದು ಗಳಿಕೆಯೂ ಇಲ್ಲದೆ ದಿಕ್ಕುತೋಚದವರಾಗಿದ್ದಾರೆ. ಸಮಾಜದ ದೃಷ್ಟಿಯಲ್ಲಿ ಬಹುದೊಡ್ಡ ವ್ಯಕ್ತಿಗಳೆಂದೂ, ಎಲ್ಲರಿಗೂ ಚಿರಪರಿಚಿತರಾಗಿರುವ ಸ್ಥಳೀಯ ಪತ್ರಕರ್ತರಿಗೆ ಕನಿಷ್ಠ ವೇತನದಂತಹ ವಿಚಾರಗಳ ಬಗ್ಗೆ ಸರ್ಕಾರವಾಗಲಿ, ಪತ್ರಿಕಾ ಮಾಲಕರಾಗಲಿ ಮೌನವಾಗಿರುವುದು ವ್ಯವಸ್ಥೆಯ ನಿಲಕ್ಷ್ಯದ ದ್ಯೋತಕವಾಗಿ ಭವಿಷ್ಯದ ಕರಾಳತೆಗೆ ಸಾಕ್ಷಿಯಾಗುತ್ತಿದೆ.


           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries