ಕಾಸರಗೋಡು: ಕಾಸರಗೋಡು ಜಿಲ್ಲೆಯ ಕಿನಾನೂರು- ಕರಿಂದಳಂ ಗ್ರಾಮ ಪಂಚಾಯತ್ ನ 2 ವಾರ್ಡ್ ಗಳ ಪೂರ್ಣ ಪ್ರಮಾಣದ ಮುಚ್ಚುಗಡೆ ( ಸಂಪೂರ್ಣ ಲಾಕ್ ಡೌನ್) ಮಾಡಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ತೀರ್ಮಾನಿಸಲಾಗಿದೆ.
ಗ್ರಾಮ ಪಂಚಾಯತ್ ನ ಒಂದು, 17 ಮತ್ತು 2ನೇ ವಾಡ್ರ್ನ ಚೋಯಂಗೋಡ್ ಎಂಬ ಪ್ರದೇಶದಲ್ಲಿ ಪೂರ್ಣ ಮುಚ್ಚುಗಡೆಯಿರುವುದು. ಏ.30ರಂದು ರಾತ್ರಿ 9 ಗಂಟೆಯಿಂದ ಮೇ 9 ವರೆಗೆ ಇಲ್ಲಿ ಪೂರ್ಣ ಲಾಕ್ಡೌನ್ ಜಾರಿಗೊಳ್ಳಲಿದೆ. ಇವು 30 ಕಿಂತ ಅಧಿಕ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ವರದಿಯಾಗಿರುವ ವಾರ್ಡ್ ಗಳಾಗಿವೆ.
4 ವಾರ್ಡ್ ಗಳಲ್ಲಿ ಕಡ್ಡಾಯ ನಿಯಂತ್ರಣ :
20ಕ್ಕಿಂತ ಅಧಿಕ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ವರದಿಯಾಗಿರುವ ಇಲ್ಲಿನ 2,5,10,13 ವಾರ್ಡ್ ಗಳಲ್ಲಿ ಕಡ್ಡಾಯ ನಿಯಂತ್ರಣ ಜಾರಿಗೊಳಿಸಲೂ ನಿರ್ಧರಿಸಲಾಗಿದೆ. 1,2ನೇ ವಾರ್ಡ್ ಗಳ ಜನ ಮನೆಗಳಿಂದ ಹೊರಗಿಳಿಯಕೂಡದು. ಈ ವಾರ್ಡ್ ಗಳ ಮತ್ತು ಚೋಯಂಗೋಡ್ ಪ್ರದೇಶದ ಎಲ್ಲ ಅಂಗಡಿ-ಸಂಸ್ಥೆಗಳು ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಲಿದ್ದು, ಉಳಿದ ಅವಧಿಯಲ್ಲಿ ಪೂರ್ಣರೂಪದಲ್ಲಿ ಮುಚ್ಚುಗಡೆಯಾಗಲಿವೆ. ಪತ್ರಿಕೆ, ಹಾಲು, ಮೆಡಿಕಲ್ ಶಾಪ್ ಇತ್ಯಾದಿಗಳನ್ನು ನಿಯಂತ್ರಣದಿಂದ ಹೊರತುಪಡಿಸಲಾಗಿದೆ. ಈ ಪ್ರದೇಶಗಳ ಮೂಲಕ ಹಾದುಹೋಗುವ ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ರಸ್ತೆಗಳ ಹೊರತಾಗಿ ಇತರ ಎಲ್ಲ ಕಿರು ರಸ್ತೆಗಳನ್ನು ಮುಚ್ಚುಗಡೆ ನಡೆಸಲು, ಸಂಚಾರ ನಿಯಂತ್ರಣ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಎಲ್ಲ ಜನ, ಜನಪ್ರತಿನಿಧಿಗಳು, ಎಂ.ಎ.ಎ.ಎಸ್.ಎಚ್. ನೋಡೆಲ್ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಈ ನಿಟ್ಟಿನಲ್ಲಿ ಪೂರ್ಣರೂಪದಲ್ಲಿ ಸಹಕರಿಸುವಂತೆ ವಿನಂತಿಸಲಾಗಿದೆ.
ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ ಕುಟುಂಬಶ್ರೀ ಸಭಾಂಗಣದಲ್ಲಿ ಜರುಗಿದ ಜನಜಾಗೃತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಕೆ.ರವಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರಲ್ ಮೆಜಿಸ್ಟ್ರೇಟ್ ವಿ.ಟಿ.ಥಾಮಸ್, ವೈದ್ಯಾಧಿಕಾರಿ ಡಾ.ಜಿಷಾ, ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ಪಿ.ಕೆ.ಸುಮೇಷ್, ಜನಪ್ರತಿನಿಧಿಗಳು, ಗ್ರಾಮಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಎಂ.ಎ.ಎ.ಎಸ್.ಎಚ್. ನೋಡೆಲ್ ಅಧಿಕಾರಿಗಳು, ಆಶಾ ಕಾರ್ಯಕರ್ತರು ಮೊದಲಾದವರು ಭಾಗವಹಿಸಿದ್ದರು. ಕಾರ್ಯದರ್ಶಿ ಎನ್.ಮನೋಜ್ ಸ್ವಾಗತಿಸಿದರು.