HEALTH TIPS

ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ಗೇಟ್ಸ್​ ಬಂಧನಕ್ಕೆ ಭಾರತೀಯರ ಆಗ್ರಹ; 2009ರಲ್ಲಿ ತೆಲಂಗಾಣದಲ್ಲಿ ನಡೆದಿದ್ದ ಅವಾಂತರಕ್ಕೆ ಅವರೂ ಕಾರಣ !


        ಹೈದಾರಾಬಾದ್​: ಭಾರತದಲ್ಲಿ ಅರೆಸ್ಟ್ ಬಿಲ್​ಗೇಟ್ಸ್​ (#ArrestBillGates) ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ. ಅನೇಕ ಟ್ವಿಟಿಗರು ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್​ರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. 2009ರಲ್ಲಿ ಭಾರತದ ಬುಡಕಟ್ಟು ಜನಾಂಗದ ಮಕ್ಕಳು ಹಾಗೂ ಮಹಿಳೆಯರ ಮೇಲೆ ಎನ್​ಜಿಒ ಒಂದು ಲಸಿಕೆಯೊಂದನ್ನು ಅನಧಿಕೃತವಾಗಿ ಪ್ರಯೋಗ ಮಾಡಿತ್ತು. ಸಂಬಂಧಪಟ್ಟವರ ಅನುಮತಿ ಪಡೆಯದೆ ಲಸಿಕೆ ಪ್ರಯೋಗ ಮಾಡಿತ್ತು. ಆ ಎನ್​​ಜಿಒಗೆ ಬಿಲ್​ಗೇಟ್ಸ್​ ತಮ್ಮ ಬಿಲ್​ ಆ್ಯಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್​ನಿಂದ ಹಣದ ನೆರವು ನೀಡಿದ್ದರು. ಹೀಗೆ ಅನಧಿಕೃತವಾಗಿ ಪ್ರಯೋಗ ಮಾಡಿ ಅನೇಕ ಪ್ರಾಣದೊಂದಿಗೆ ಆಟವಾಡಿದ್ದಕ್ಕೆ ಬಿಲ್​ಗೇಟ್ಸ್​ರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ.

        ಬಿಲ್​ಗೇಟ್ಸ್​ ಇತ್ತೀಚೆಗೆ ಪತ್ನಿಗೆ ಡಿವೋರ್ಸ್​ ನೀಡಿ ಸುದ್ದಿಯಾಗಿದ್ದರು. ಅವರ ಪತ್ನಿಗೆ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ಇನ್ನೊಬ್ಬ ಮಹಿಳಾ ಉದ್ಯೋಗಿಯೊಂದಿಗೆ ಅಫೇರ್​ ಇದೆ ಎಂಬು ವಿಚಾರಕ್ಕೆ ಇವರಿಬ್ಬರೂ ಬೇರೆಯಾಗಿದ್ದು ಟ್ರೆಂಡ್ ಆಗಿತ್ತು. ಇದೀಗ ಬಿಲ್​ಗೇಟ್ಸ್​ ಮತ್ತೊಮ್ಮೆ ಟ್ರೆಂಡ್ ಆಗಿದ್ದಾರೆ.

        ಸಿಯಾಟಲ್ ಮೂಲದ ಎನ್​ಜಿಒ ಪ್ರೋಗ್ರಾಂ ಫಾರ್​ ಅಪ್ರೋಪ್ರಿಯೇಟ್​ ಟೆಕ್ನಾಲಜಿ ಹೆಲ್ತ್​ (PATH) ಈ ಲಸಿಕೆ ಪ್ರಯೋಗ ನಡೆಸಿತ್ತು. ತೆಲಂಗಾಣದ ಖಮ್ಮಮ್​ ಎಂಬಲ್ಲಿ ಬುಡಕಟ್ಟು ಜನಾಂಗದ 14000 ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್​​ಪಿವಿ) ಲಸಿಕೆಯನ್ನು ಅನಧಿಕೃತವಾಗಿ ನೀಡಿತ್ತು. ಇದು ಲೈಂಗಿಕ ಸಂಪರ್ಕದಿಂದ ಹರಡುವ ಒಂದು ಬಗೆಯ ಸೋಂಕಾಗಿದೆ. ಆದರೆ ಹೀಗೆ ಲಸಿಕೆ ಪ್ರಯೋಗ ಮಾಡಲು ಇಲ್ಲಿನ ಸರ್ಕಾರಗಳಾಗಳ, ಆಡಳಿತಗಳ ಅನುಮತಿಯನ್ನು ಪಡೆದಿರಲಿಲ್ಲ ಎಂದು ವರದಿಯಾಗಿದೆ. ಇನ್ನು ಎನ್​​ಜಿಒ ಈ ಲಸಿಕೆ ಪ್ರಯೋಗವನ್ನು ಕಾರ್ಯಗತಗೊಳಿಸಲು ಅಗತ್ಯವಿದ್ದ ಆರ್ಥಿಕ ನೆರವನ್ನು ಬಿಲ್​ಗೇಟ್ಸ್​ರ ಬಿಲ್​ ಆ್ಯಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್​​ ನೀಡಿತ್ತು.

      ಇನ್ನು ತಮ್ಮ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎಂಬುದು ಅವರ ಪಾಲಕರಿಗೂ ಗೊತ್ತಿರಲಿಲ್ಲ. ಲಸಿಕೆ ಪಡೆದ ಅನೇಕರು ಅನಾರೋಗ್ಯಕ್ಕೀಡಾಗಿದ್ದರು. ಒಂದಷ್ಟು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಗ್ರೇಟ್​ ಗೇಮ್​ ಇಂಡಿಯಾ ಒಂದು ಲೇಖನ ಪ್ರಕಟಿಸಿದೆ. ಅದರಲ್ಲಿ ಬಿಲ್​ ಗೇಟ್ಸ್​ರಿಂದ ಹಣದ ನೆರವು ಪಡೆದ ಪಾಥ್​ ಎನ್​ಜಿಒ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳನ್ನು ಹೇಗೆ ಹತ್ಯೆ ಮಾಡಿತು ಎಂಬ ಬಗ್ಗೆ ವಿವರಿಸಲಾಗಿದೆ. ಮೇ 25ರಂದು ವಿಷಯ ಬಹಿರಂಗವಾದ ಬೆನ್ನಲ್ಲೇ ಅರೆಸ್ಟ್ ಬಿಲ್​ಗೇಟ್ಸ್​ ಎಂಬ ಹ್ಯಾಷ್​ಟ್ಯಾಗ್​ನಡಿ ಭಾರತೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries