ಕೊಚ್ಚಿ: ಖ್ಯಾತ ಚಿತ್ರನಟ ಮೋಹನ್ ಲಾಲ್ ನೇತೃತ್ವದಲ್ಲಿರುವ ವಿಶ್ವಶಾಂತಿ ಫೌಂಡೇಶನ್ ಕೊರೋನಾದ ಎರಡನೇ ಅಲೆಯಲ್ಲಿ ಜನಸಾಮಾನ್ಯರಿಗೆ ನೆರವಾಗಲು ಮುಂದೆಬಂದಿದೆ. ವಿಶ್ವಶಾಂತಿ ಫೌಂಡೇಶನ್ ಕೇರಳದ ವಿವಿಧ ಸರ್ಕಾರಿ, ಖಾಸಗಿ ಮತ್ತು ಸಹಕಾರಿ ಆಸ್ಪತ್ರೆಗಳಿಗೆ 200 ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳನ್ನು ನಿನ್ನೆ ಉಚಿತವಾಗಿ ನೀಡಿ ಗಮನಾರ್ಹವಾಗಿದೆ.
ಅಲ್ಲದೆ, ವೆಂಟಿಲೇಟರ್ ವ್ಯವಸ್ಥೆಯನ್ನು ಹೊಂದಿರುವ ಸುಮಾರು 10 ಐಸಿಯು ಹಾಸಿಗೆಗಳನ್ನು ಕೊಡುಗೆಯಾಗಿ ನೀಡಿದೆ. ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳು ಸುಮಾರು 1.5 ಕೋಟಿ ರೂ. ನೆರವು ಹಾಗೂ ದೇಶದ ವಿವಿಧ ನಗರಗಳಲ್ಲಿ ಕೊರೋನಾ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಸ್ವತಃ ಮೋಹನ್ ಲಾಲ್ ನಿನ್ನೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಘೋಷಿಸಿರುವರು.