ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 20156 ಅಂಚೆ ಮತಗಳಿವೆ. ಜಿಲ್ಲೆಯಲ್ಲಿ ವಿತರಣೆಗೊಂಡಿರುವ ಅಂಚೆಮತಗಳು ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ :
ಮಂಜೇಶ್ವರ - 2513
ಕಾಸರಗೋಡು - 2553
ಉದುಮಾ - 4214
ಕಾಞಂಗಾಡು - 4859
ತ್ರಿಕರಿಪುರ - 6017
ಮತಗಣನೆಯ ದಿನವಾಗಿರುವ ಮೇ 2ರಂದು ಬೆಳಗ್ಗೆ 7.59ರ ವರೆಗೆ ಅಂಚೆ ಮೂಲಕ ಲಭಿಸುವ ಅಂಚೆಮತಗಳನ್ನು ಸ್ವೀಕರಿಸಲಾಗುವುದು.
ಕೆ.ಎಸ್.ಆರ್.ಟಿ.ಸಿ. ಬಸ್ ವಿಶೇಷ ಸಂಚಾರ ಕಾಸರಗೋಡು, ಮೇ 1 : ಮತಗಣನೆಯ ದಿನವಾದ ಮೇ 2ರಂದು ಮತಗಣನೆ ಕೇಂದ್ರಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವಿಶೇಷ ಸಂಚಾರ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕುಂಬಳೆಯಿಂದ ಕಾಲಿಕಡವಿಗೆ , ಮಧ್ಯಾಹ್ನ 3 ಗಂಟೆಗೆ ತ್ರಿಕರಿಪುರ ಸರಕಾರಿ ಪಾಲಿಟೆಕ್ನಿಕ್ ನಿಂದ ಮಂಜೇಶ್ವರಕ್ಕೆ , ಸಂಜೆ 4 ಗಂಟೆಗೆ ಕಾಞಂಗಾಡಿನಿಂದ ಚಿತ್ತಾರಿಕಲ್ಲಿಗೆ ವಿಶೇಷ ಸಂಚಾರವಿರುವುದು.