ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ 20 ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳು ಕೇರಳದಲ್ಲಿವೆ. ಕೇಂದ್ರವು ಈ ಜಿಲ್ಲೆಗಳಲ್ಲಿ ತಪಾಸಣೆ ಹೆಚ್ಚಿಸಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ನಿರ್ದೇಶನ ನೀಡಿದೆ.
ಈ ಪಟ್ಟಿಯಲ್ಲಿ ಮಲಪ್ಪುರಂ, ತ್ರಿಶೂರ್, ತಿರುವನಂತಪುರ ಮತ್ತು ಪಾಲಕ್ಕಾಡ್ ಜಿಲ್ಲೆಗಳು ಸೇರಿವೆ ಎಂದು ತಿಳಿದುಬಂದಿದೆ. ಕಳೆದ ಒಂದು ವಾರದಲ್ಲಿ ದೇಶದ 180 ಜಿಲ್ಲೆಗಳಲ್ಲಿ ಕೋವಿಡ್ ನ ಒಂದು ಪ್ರಕರಣವೂ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ನಿನ್ನೆ ಮಾಹಿತಿ ನೀಡಿದ್ದರು.
ಕಳೆದ 21 ದಿನಗಳಲ್ಲಿ 54 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು. ದೇಶದಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿ ಮುಂದುವರಿದಿರುವಾಗ ಸಚಿವರು ಈ ಬಗ್ಗೆ ನೀಡಿರುವ ಮಾಹಿತಿ ಆಶಾಭಾವಕ್ಕೆ ಕಾರಣವಾಗಿದೆ.