ತಿರುವನಂತಪುರ: ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿರುವ ಎಲ್.ಡಿ.ಎಫ್ ಸರ್ಕಾರದಲ್ಲಿ ಸಚಿವರ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ. ಸಿಪಿಎಂಗೆ 12 ಮಂತ್ರಿಗಳು ಮತ್ತು ಸ್ಪೀಕರ್ ಇರಲಿದ್ದಾರೆ. ಸಿಪಿಐ ಗೆ ನಾಲ್ಕು ಮಂತ್ರಿ ಹುದ್ದೆಗಳು ಹಾಗೂ ಉಪ ಸ್ಪೀಕರ್ ಹುದ್ದೆ ಸಿಗಲಿದೆ.
ಕೇರಳ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ಮತ್ತು ಮುಖ್ಯ ವಿಪ್ ಹುದ್ದೆ ಇರುತ್ತದೆ. ಈ ಹಿಂದೆ ಕೇರಳ ಕಾಂಗ್ರೆಸ್ ಎರಡು ಮಂತ್ರಿ ಹುದ್ದೆಗಳನ್ನು ಕೇಳಿಕೊಂಡಿತ್ತು ಆದರೆ ಸಿಪಿಎಂ ನಾಯಕತ್ವವು ಕೇವಲ ಒಂದು ಮಾತ್ರ ನೀಡಬಹುದೆಂದು ಹೇಳಿದೆ. ಪ್ರಮುಖ ಇಲಾಖೆಗಳಲ್ಲಿ ಒಂದನ್ನು ಕೇರಳ ಕಾಂಗ್ರೆಸ್‍ಗೆ ನೀಡಲಾಗುವುದು.
ಸಿಪಿಐ ನಿರ್ವಹಿಸುವ ಇಲಾಖೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ, ಸಿಪಿಎಂ ಹೆಚ್ಚಿನ ವಿವಾದಗಳಿಗೆ ಆಸ್ಪದನೀಡದು ಎನ್ನಲಾಗಿದೆ. ಸಿಪಿಎಂ ಕೈಯಲ್ಲಿರುವ ಲೋಕೋಪಯೋಗಿ ಅಥವಾ ವಿದ್ಯುತ್ ಸಿಪಿಐಗೆ ಲಭ್ಯವಾಗುವ ಸಾಧ್ಯತೆಯಿದೆ.
ಜೆಡಿಎಸ್ ಮತ್ತು ಎನ್‍ಸಿಪಿನ ಪ್ರತಿಯೊಬ್ಬರಿಗೂ ಮಂತ್ರಿ ಪದವಿ ಲಭ್ಯವಾಗಲಿದೆ. ಏಕ ಪಕ್ಷಗಳಲ್ಲಿ ಕೆ.ಬಿ. ಗಣೇಶ್ ಕುಮಾರ್ ಮತ್ತು ಆಂಟನಿ ರಾಜು ಸಚಿವಾಲಯವನ್ನು ಪಡೆಯಲಿದ್ದಾರೆ. ಆಂಟನಿ ರಾಜು ಅವರ ಮೊದಲ ಎರಡೂವರೆ ವರ್ಷಗಳ ನಂತರ, ಸಚಿವಾಲಯವನ್ನು ಐಎನ್ ಎಲ್ ಪ್ರತಿನಿಧಿ ಅಹ್ಮದ್ ದೇವರ್ಕೋವಿಲ್ ಅವರಿಗೆ ಹಸ್ತಾಂತರಿಸಬೇಕು.
ಇಂದು ನಡೆಯಲಿರುವ ಸಿಪಿಎಂ ನಾಯಕತ್ವ ಸಭೆಯ ನಂತರ ಇವುಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಸಿಪಿಎಂ ನಾಯಕತ್ವವು ಪಕ್ಷದ ಎಲ್ಲ ಮುಖಂಡರೊಂದಿಗೆ ಚರ್ಚಿಸಲಿದೆ.