ತಿರುವನಂತಪುರ: ಮುಂದಿನ ವರ್ಷ ಮಾರ್ಚ್ 31 ರವರೆಗೆ ರಾಜ್ಯದಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಕೆಎಸ್‍ಇಬಿ ಹೇಳಿದೆ. ಈಗ ಕೇಳಿಬರುತ್ತಿರುವ ದರ ಹೆಚ್ಚಳದ ಪ್ರಚಾರ ಸುಳ್ಳು ಮತ್ತು ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‍ಇಬಿ ಮಾಹಿತಿ ನೀಡಿದೆ.
ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಪಾವತಿ ಬಿಲ್ ಗಳು ಅನೇಕ ಸ್ಥಳಗಳಲ್ಲಿ ಈಗಷ್ಟೇ ತಲಪಿದೆ. ಇವುಗಳಲ್ಲಿ ಹಲವು ಬಿಲ್ ಮೊತ್ತ ಹೆಚ್ಚಾಗಿದೆ. ಇದು ದರ ಹೆಚ್ಚಳದ ಅನುಮಾನಗಳಿಗೆ ಕಾರಣವಾಯಿತು. ಕೆಎಸ್‍ಇಬಿ ಕೊನೆಯದಾಗಿ 2019 ರ ಜುಲೈನಲ್ಲಿ ರಾಜ್ಯದಲ್ಲಿ ದರವನ್ನು ಹೆಚ್ಚಿಸಿದೆ.
ಮುಂದಿನ ವರ್ಷ ಮಾರ್ಚ್ 31 ರವರೆಗೆ ದರ ಏರಿಕೆ ಇರುವುದಿಲ್ಲ ಎಂದು ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿತ್ತು. ಇದಲ್ಲದೆ, ಕೆಎಸಿಇಬಿ ದರ ಹೆಚ್ಚಳಗೊಳಿಸುವ ಯಾವುದೇ ಬೇಡಿಕೆ ಈವರೆಗೆ ಪ್ರಸ್ತಾಪಿಸಿಲ್ಲ. ಅನೇಕ ಜನರು ಅದನ್ನು ಅರಿತುಕೊಳ್ಳದೆ ನಕಲಿ ಸಂದೇಶಗಳನ್ನು ಹರಡುತ್ತಿದ್ದಾರೆ ಎಂದು ಕೆಎಸ್‍ಇಬಿ ಹೇಳಿದೆ.