ತಿರುವನಂತಪುರ: ರಾಜ್ಯದಲ್ಲಿ ಇಂದು 22,318 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 3938, ತಿರುವನಂತಪುರ 2545, ಕೊಲ್ಲಂ 2368, ಎರ್ನಾಕುಳಂ 2237, ಪಾಲಕ್ಕಾಡ್ 2038, ತ್ರಿಶೂರ್ 1726, ಕೊಝಕೋಡ್ 1697, ಆಲಪ್ಪುಳ 1640, ಕೊಟ್ಟಾಯಂ 1128, ಕಣ್ಣೂರು 974, ಪತ್ತನಂತಿಟ್ಟು 728, ಕಾಸರಗೋಡು 534, ಇಡುಕ್ಕಿ 501, ವಯನಾಡ್ 264 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,36,068 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 16.4.ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,94,40,287 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 126 ಮಂದಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 194 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 8,257 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 164 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 20,885 ಮಂದಿ ಜನರಿಗೆ ಸೋಂಕು ತಗುಲಿತು. 1175 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3807, ತಿರುವನಂತಪುರ 2333, ಕೊಲ್ಲಂ 2360, ಎರ್ನಾಕುಳಂ 2156, ಪಾಲಕ್ಕಾಡ್ 1346, ತ್ರಿಶೂರ್ 1710, ಕೋಝಿಕೋಡ್ 1658, ಆಲಪ್ಪುಳ 1630, ಕೊಟ್ಟಾಯಂ 1051, ಕಣ್ಣೂರು 885, ಪತ್ತನಂತಿಟ್ಟು 699, ಕಾಸರಗೋಡು 522, ಇಡುಕ್ಕಿ 483, ವಯನಾಡ್ 245 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 94 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ. ಕಣ್ಣೂರು 17, ಪತ್ತನಂತಿಟ್ಟು 16, ಪಾಲಕ್ಕಾಡ್ 10, ಎರ್ನಾಕುಳಂ 9, ತ್ರಿಶೂರ್, ಕಾಸರಗೋಡು 8, ತಿರುವನಂತಪುರ 7, ಕೊಲ್ಲಂ, ವಯನಾಡ್ 6, ಕೋಝಿಕೋಡ್ 3, ಕೊಟ್ಟಾಯಂ ಮತ್ತು ಮಲಪ್ಪುರಂ 2 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 26,270 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 3276, ಕೊಲ್ಲಂ 2056, ಪತ್ತನಂತಿಟ್ಟು 781, ಆಲಪ್ಪುಳ 1830, ಕೊಟ್ಟಾಯಂ 652, ಇಡುಕ್ಕಿ 954, ಎರ್ನಾಕುಳಂ 2303, ತ್ರಿಶೂರ್ 2073, ಪಾಲಕ್ಕಾಡ್ 2543, ಮಲಪ್ಪುರಂ 3260, ಕೊಝಿಕೋಡ್ 1493, ವಯನಾಡ್ 2444, ಕಣ್ಣೂರು 2020, ಕಾಸರಗೋಡು 585, ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,37,819 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 22,24,405 ಮಂದಿ ಜನರನ್ನು ಕೋವಿಡ್ನಿಂದ ಬಿಡುಗಡೆ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 8,57,227 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 8,18,117 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 39,110 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 3677 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 880 ಹಾಟ್ಸ್ಪಾಟ್ಗಳಿವೆ.