ಕಾಸರಗೋಡು: ಕಾಸರಗೋಡು ಜಿಲ್ಲೆಯ 23 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಂಡಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಕೋವಿಡ್ ಪ್ರತಿರೋಧ ಚಟವಟಿಕೆಗಳ ಅಂಗವಾಗಿ ನೀಲೇಶ್ವರ, ಕಾಞಂಗಾಡು ನಗರಸಭೆಗಳ ಸಹಿತ 23 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. 144 ಪ್ರಕಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನಿಷೇಧಾಜ್ಞೆ ಘೋಷಿಸಿದರು.
ಎಲ್ಲೆಲ್ಲಿ ನಿಷೇಧಾಜ್ಞೆ?
ಕಾಞಂಗಾಡು, ನೀಲೇಶ್ವರ ನಗರಸಭೆಗಳು, ಗ್ರಾಮ ಪಂಚಾಯತ್ ಗಳಾದ ಮಧೂರು, ಮಂಗಲ್ಪಾಡಿ, ಚೆಂಗಳ, ಚೆಮ್ನಾಡು, ಬೇಡಡ್ಕ, ಅಜಾನೂರು, ಬಳಾಲ್, ಚೆರುವತ್ತೂರು, ಈಸ್ಟ್ ಏಳೇರಿ, ಕಳ್ಳಾರ್, ಪಳ್ಳಿಕ್ಕರೆ, ಉದುಮಾ, ಪಡನ್ನ, ಕಯ್ಯೂರು-ಚೀಮೇನಿ, ಕಿನಾನೂರು-ಕರಿಂದಳಂ, ಕೋಡೋಂ-ಬೇಳೂರು, ತ್ರಿಕರಿಪುರ, ವೆಸ್ಟ್ ಏಳೇರಿ, ಈಸ್ಟ್ ಏಳೇರಿ, ಪಿಲಿಕೋಡ್ ಗಳ ಎಲ್ಲ ಪ್ರದೆಶಗಳಲ್ಲಿ ನಿಷೇಧಾಜ್ಞೆಯಿದೆ. ಮೇ 6ರ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಡಿರುವ ಪ್ರದೇಶಗಳಲ್ಲಿ ಜನಗುಂಪು ಸೇರಕೂಡದು ಎಂದು ತಿಳಿಸಲಾಗಿದೆ.