ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಲಾಕ್‍ಡೌನ್ ನ್ನು ಮೇ 23 ರವರೆಗೆ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಅನಿಯಂತ್ರಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವಲ್ಲಿ ಕಠಿಣ ನಿಯಂತ್ರಣ ಅಗತ್ಯ ಎಂದು ಸಿಎಂ ಹೇಳಿದರು.
ಮೇ.16 ರ ಬಳಿಕ ತಿರುವನಂತಪುರ, ತ್ರಿಶೂರ್, ಎರ್ನಾಕುಳಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್‍ಡೌನ್ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ರೋಗ ಹರಡುವುದನ್ನು ಕಡಿಮೆ ಮಾಡಲು ಕಟ್ಟುನಿಟ್ಟಿನ ನಿಯಂತ್ರಣವನ್ನು ತರಲಾಗುತ್ತಿದೆ. ಲಾಕ್‍ಡೌನ್ ವಿಸ್ತರಿಸುವಿಕೆಯಿಂದ ಜನರು ಸ್ವಾಭಾವಿಕವಾಗಿ ಸ್ವಲ್ಪ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಆದರೆ ಸಹಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಮೊದಲ ಹಂತದಲ್ಲಿ ಕೋವಿಡ್ ಅನುಭವವನ್ನು ಗಣನೆಗೆ ತೆಗೆದುಕೊಂಡು, ಈ ಬಾರಿ ಎರಡನೇ ತರಂಗದಿಂದ ಉಂಟಾಗುವ ತೊಂದರೆಯನ್ನು ನಿವಾರಿಸಲು ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆಹಾರ ಕಿಟ್ ಗಳನ್ನು ಜೂನ್ ತಿಂಗಳಲ್ಲೂ ವಿತರಿಸಲಾಗುವುದು ಎಂದು ಸಿಎಂ ಹೇಳುತ್ತಾರೆ.
ಸಾಮಾಜಿಕ ಪಿಂಚಣಿ ವಿತರಣೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಸಿಎಂ ಹೇಳಿದರು. ಲಾಕ್‍ಡೌನ್ ವಿಸ್ತರಿಸುವ ಅಗತ್ಯವನ್ನು ವಿವಿಧ ಇಲಾಖೆಗಳ ತಜ್ಞರ ಸಮಿತಿಯ ಸಭೆಯಲ್ಲಿ ಮಂಡಿಸಲಾಯಿತು. ಲಾಕ್ ಡೌನ್ ಇನ್ನೂ ಒಂದು ವಾರ ವಿಸ್ತರಿಸಬೇಕೆಂದು ವಿಪತ್ತು ನಿರ್ವಹಣಾ ಇಲಾಖೆ ಮತ್ತು ಪೋಲೀಸರು ಸೇರಿದಂತೆ ಇಲಾಖೆಗಳು ಕೇಳಿಕೊಂಡಿವೆ ಎಮನದು ಮುಖ್ಯಮಂತ್ರಿ ತಿಳಿಸಿದರು.