ತಿರುವನಂತಪುರ: ಕೇರಳದಲ್ಲಿ ಇಂದು 24,166 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 4212, ತಿರುವನಂತಪುರ 3210, ಎರ್ನಾಕುಳಂ 2779, ಪಾಲಕ್ಕಾಡ್ 2592, ಕೊಲ್ಲಂ 2111, ತ್ರಿಶೂರ್ 1938, ಆಲಪ್ಪುಳ 1591, ಕೋಝಿಕೋಡ್ 1521, ಕಣ್ಣೂರು 1023, ಕೊಟ್ಟಾಯಂ 919, ಪತ್ತನಂತಿಟ್ಟು 800, ಕಾಸರಗೋಡು 584, ಇಡುಕ್ಕಿ 571, ವಯನಾಡ್ 315 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,35,232 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 17.87. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಐಂಒP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,93,04,219 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 126 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಇಂದು, ಕೋವಿಡ್ ಬಾಧಿಸಿ 181 ಮಂದಿ ಮೃತಪಟ್ಟಿರುವರು. ಈ ಮೂಲಕ ಕೋವಿಡ್ ಬಾಧಿಸಿ ಮೃತಪಟ್ಟವರ ಒಟ್ಟು ಸಂಖ್ಯೆ 8063 ಕ್ಕೆ ಏರಿಕೆಯಾಗಿದೆ.
ಇಂದು, ಸೋ|ಂಕು ನಿರ್ಣಯ ಮಾಡಿದವರಲ್ಲಿ 177 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 22,193 ಮಂದಿ ಜನರಿಗೆ ಸೋಂಕು ತಗುಲಿತು. 1707 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಮಲಪ್ಪುರಂ 4057, ತಿರುವನಂತಪುರ 3054, ಎರ್ನಾಕುಳಂ 2700, ಪಾಲಕ್ಕಾಡ್ 1259, ಕೊಲ್ಲಂ 2096, ತ್ರಿಶೂರ್ 1920, ಆಲಪ್ಪುಳ 1580, ಕೋಝಿಕೋಡ್ 1505, ಕಣ್ಣೂರು 959, ಕೊಟ್ಟಾಯಂ 862, ಪತ್ತನಂತಿಟ್ಟು 776, ಕಾಸರಗೋಡು 568, ಇಡುಕ್ಕಿ 549, ವಯನಾಡ್ 308 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 89 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಲ್ಪಟ್ಟಿದೆ. ಕಣ್ಣೂರು 18, ಪಾಲಕ್ಕಾಡ್ 11, ತಿರುವನಂತಪುರ, ಕೊಲ್ಲಂ ತಲಾ 10, ಎರ್ನಾಕುಳಂ, ಕಾಸರಗೋಡು ತಲಾ 9, ಪತ್ತನಂತಿಟ್ಟು, ತ್ರಿಶೂರ್ ತಲಾ 8, ಕೊಟ್ಟಾಯಂ 3, ಇಡಕ್ಕಿ, ಮಲಪ್ಪುರಂ ಮತ್ತು ವಯನಾಡ್ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 30,539 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 3247, ಕೊಲ್ಲಂ 2034, ಪತ್ತನಂತಿಟ್ಟು 1187, ಆಲಪ್ಪುಳ 2794, ಕೊಟ್ಟಾಯಂ 1344, ಇಡುಕ್ಕಿ 946, ಎರ್ನಾಕುಳಂ 4280, ತ್ರಿಶೂರ್ 1531, ಪಾಲಕ್ಕಾಡ್ 3144, ಮಲಪ್ಪುರಂ 4505, ಕೋಝಿಕೋಡ್ 235, ವಯನಾಡ್ 378, ಕಣ್ಣೂರು 2255, ಕಾಸರಗೋಡು 578 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,41,966 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 21,98,135 ಮಂದಿಯನ್ನು ಈವರೆಗೆ ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 8,76,584 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 8,36,420 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 40,164 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಇಂದು ಹೊಸತಾಗಿ 4001 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 880 ಹಾಟ್ಸ್ಪಾಟ್ಗಳಿವೆ.