ನವದೆಹಲಿ: ಹೊಸ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಲು ಮೇ 24 ರಂದು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೇರಳದ ಡಿಜಿಪಿ ಲೋಕನಾಥ್ ಬೆಹೆರಾ ಸಹಿತ ಸಿಬಿಐ ನಿರ್ದೇಶಕ ಹುದ್ದೆಗೆ ಪರಿಗಣಿಸಲ್ಪಟ್ಟವರ ಹೆಸರನ್ನು ಸಮಿತಿಗೆ ಹಸ್ತಾಂತರಿಸಲಾಗಿದೆ.
ಲೋಕನಾಥ ಬೆಹ್ರಾ 1985 ರ ಬ್ಯಾಚ್ ಕೇರಳ ಕೇಡರ್ ಐಪಿಎಸ್ ಅಧಿಕಾರಿ. ಆಲಪ್ಪುಳ ಎಸ್.ಪಿಯಾಗಿ ಅವರ ಮೊದಲ ನೇಮಕಾತಿ ನಡೆದಿತ್ತು. ಬೆಹ್ರಾ ತಿರುವನಂತಪುರ ನಗರ ಪೆÇಲೀಸ್ ಉಪ ಆಯುಕ್ತರು, ಕೊಚ್ಚಿ ಪೋಲೀಸ್ ಆಯುಕ್ತ ಮತ್ತು ಐಜಿ, ಎಡಿಜಿಪಿ ಮತ್ತು ಪೋಲೀಸ್ ಪ್ರಧಾನ ಕಚೇರಿಯಲ್ಲಿ ವಿಜಿಲೆನ್ಸ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಿಬಿಐ ಹಂಗಾಮಿ ನಿರ್ದೇಶಕ ಪ್ರವೀಣ್ ಸಿನ್ಹಾ, ಬಿ.ಎಎಸ್.ಎಫ್ ಮುಖ್ಯಸ್ಥ ರಾಕೇಶ್ ಅಸ್ತಾನಾ, ಎನ್.ಐ.ಎ ಮುಖ್ಯಸ್ಥ ವೈಸಿ ಮೋದಿ ಮತ್ತು ಸಿಐಎಸ್.ಎಫ್ ಮುಖ್ಯಸ್ಥ ಸುಬೋಧ್ ಕ್ಯಾಥ್ ಜೈಸ್ವಾಲ್ ಇತರ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ರಿಷಿ ಕುಮಾರ್ ಶುಕ್ಲಾ ಅವರ ನಿವೃತ್ತಿಯ ನಂತರ, ಕೇಂದ್ರವು ಪ್ರವೀಣ್ ಸಿನ್ಹಾ ಅವರನ್ನು ಫೆಬ್ರವರಿ ಮೊದಲ ವಾರದಿಂದ ಸಿಬಿಐನ ಹಂಗಾಮಿ ನಿರ್ದೇಶಕರಾಗಿ ನೇಮಿಸಿತ್ತು.