ಕಾಸರಗೊಡು: ಅರೆಬಿ ಸಮುದ್ರದಲ್ಲಿ ತಲೆದೋರಿರುವ ವಾಯುಭಾರ ಮುಂದಿನ 24 ತಾಸುಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅತೀವ ಜಾಗ್ರತೆ ಪಾಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಹಿನ್ನೆಲೆಯಲ್ಲಿ 30 ಮಂದಿ ಸದಸ್ಯರಿರುವ ರಾಷ್ಟ್ರೀಯ ಪಿಡುಗು ನಿವಾರಣೆ ಸೇನೆಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. 4 ಮೀ. ವರೆಗಿನ ಎತ್ತರದಲ್ಲಿ ಅಲೆಗಳು ತಲೆದೋರಬಹುದು ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜನವಾಸವಿರುವ ಮುಸೋಡಿ, ಚೇರಂಗಾಯಿ, ಕಾಪಿಲ್, ತೈಕಡಪ್ಪುರಂ ಪ್ರದೇಶಗಳಲ್ಲಿ ಜಾಗ್ರತೆ ಪಾಲಿಸುವ ನಿಟ್ಟಿನಲ್ಲಿ ಕಂದಾಯ, ಮೀನುಗಾರಿಕೆ, ಕರಾವಳಿ ಪೆÇಲೀಸ್ ಇಲಾಖೆಗಳಿಗೆ ಜಿಲ್ಲಾಧಿಕಾರಿ ಆದೇಶ ನಿಡಿದರು. ಸ್ಥಳೀಯಾಡಳಿತ ಸಂಸ್ಥೆಗಳು ಪಿಡುಗು ನಿವಾರಣೆ ಚಟುವಟಿಕೆಗಾಗಿ ರಂಗಕ್ಕಿಳಿಯುವಂತೆ ಅವರು ಆದೇಶಿಸಿದರು. 4 ತಾಲೂಕುಗಳಲ್ಲೂ, ಜಿಲ್ಲಾಧಿಕಾರಿ ಕಚೇರಿಯಲ್ಲೂ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿವೆ. ಯಾವ ಪರಿಸ್ಥಿತಿಯನ್ನೂ ಎದುರಿಸುವ ನಿಟ್ಟಿನಲ್ಲಿ ಸಜ್ಜುಗೊಳ್ಳುವಂತೆ ಪೆÇಲೀಸ್, ಅಗ್ನಿಶಾಮಕದಳಕ್ಕೆ ಆದೇಶ ನೀಡಲಾಗಿದೆ.
ತಾಲೂಕು ಮಟ್ಟಗಳ ನಿಯಂತ್ರಣ ಕೊಠಡಿಗಳ ಸಜ್ಜು
ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಲರಿಕುಂಡ್ ತಾಲೂಕುಗಳಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳು ಸಜ್ಜುಗೊಂಡಿವೆ. ಬಿರುಸಿನ ಗಾಳಿ, ಅಮುದ್ರದಲ್ಲಿ ಬಿರುಸಿನ ಅಲೆಗಳು ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರಿಕೆ, ಪೆÇಲೀಸ್, ಕಂದಾಯ ಇಲಾಖೆಗಳು
ಕರಾವಳಿ ಪ್ರದೇಶಗಳಲ್ಲಿ ಜಾಗರೂಕತೆ ನಡೆಸುತ್ತಿದ್ದಾರೆ. ಮುಸೋಡಿ ಕಡಪ್ಪುರಂ, ಕಾಪಿಲ್ ಬೀಚ್, ತೈಕಡಪ್ಪುರಂ ಸಹಿತ ಪ್ರದೇಶಗಳಲ್ಲಿ ಹೆಚ್ಚುವರಿ ಜಾಗೃತಿ ನಡೆಸಲಾಗುತ್ತಿದೆ.
ತಾಲೂಕು ಮಟ್ಟಗಳ ನಿಯಂತ್ರಣಕೊಠಡಿಗಳ ದೂರವಾಣಿ ಸಂಖ್ಯೆಗಳು ಇಂತಿವೆ:
ಮಂಜೇಶ್ವರ - 04998-244022
ಕಾಸರಗೋಡು - 04994-230021
ಹೊಸದುರ್ಗ - 0467-2204042
ವೆಳ್ಳರಿಕುಂಡ್ - 0467-2242320.
ಕಾಸರಗೋಡು ಜಿಲ್ಲಾ ಮಟ್ಟದ ತುರ್ತು ಕ್ರಮ ಕೇಂದ್ರದ ದೂರವಾಣಿ ಸಂಖ್ಯೆ: 04994-257700.
ವಿದ್ಯುತ್ ವಿಭಾಗ ನಿಯಂತ್ರಣ ಕೊಠಡಿ ಆರಂಭ
ಹವಾಮಾನ ಇಲಾಖೆ ನೀಡಿರುವ ಸೂಚನೆ ಪ್ರಕಾರ ರಾಜ್ಯದಲ್ಲಿ ಬಿರುಸಿನ ಗಾಳಿಮಳೆ ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ವಿದ್ಯುತ್ ವಲಯ ವಿಭಾಗದಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ವಿದ್ಯುತ್ ಅಪಾಯಗಳು ಸಂಭವಿಸಿದಲ್ಲಿ ಯಾ ಭೀತಿಯಿದ್ದಲ್ಲಿ ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು:
ಎಮರ್ಜೆನ್ಸಿ ನಂಬ್ರ: 9496010101
ಟಾಲ್ ಫ್ರೀ ನಂಬ್ರ : 1912
ಕಾಸರಗೋಡು ವಲಯ ಕಚೇರಿ ನಿಯಂತ್ರಣಕೊಠಡಿ: 949611431