HEALTH TIPS

ನಿರ್ಗತಿಕ ಮಕ್ಕಳ ರಕ್ಷಣೆಗೆ ನಿಯಮಾವಳಿ; ಹೆತ್ತವರ ಕಳೆದುಕೊಂಡ 24 ಗಂಟೆಯೊಳಗೆ ಮಕ್ಕಳನ್ನು ಹಾಜರು ಪಡಿಸಬೇಕು

         ನವದೆಹಲಿ: ಕೋವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ನಿರ್ಗತಿಕರಾದ ಮಕ್ಕಳ ಪುನರ್ವಸತಿಗೆ ಕೇಂದ್ರ ಸರ್ಕಾರ ಹೊಸ ನಿಯಮಾವಳಿ ರೂಪಿಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ನಿಯಮಾವಳಿ ಪ್ರಕಾರ ಯಾವುದೇ ಮಗು ಕರೊನಾ ಕಾರಣಕ್ಕೆ ಹೆತ್ತವರು ಅಥವಾ ಪಾಲಕರಿಬ್ಬರನ್ನೂ ಕಳೆದುಕೊಂಡಲ್ಲಿ 24 ಗಂಟೆಯೊಳಗೆ (ಪ್ರಯಾಣದ ಅವಧಿ ಬಿಟ್ಟು) ಅವರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಎದುರು ಹಾಜರುಪಡಿಸಬೇಕು. ಇದಾದ ತಕ್ಷಣ ಸಿಡಿಬ್ಲ್ಯೂಸಿ ಮಕ್ಕಳ ಪುನರ್ವಸತಿ ವ್ಯವಸ್ಥೆ ಕಲ್ಪಿಸಿ ನಿರ್ಧಾರ ಹೊರಡಿಸಬೇಕು. ಆಯಾ ಮಕ್ಕಳ ನಿಗಾ ಹೊರುವುದು ಸಂಸ್ಥೆಯೇ ಅಥವಾ ಸಾಂಸ್ಥಿಕೇತರವೇ ಎಂಬುದನ್ನು ಖಚಿತ ಪಡಿಸಬೇಕೆಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇನ್ನು ಹೆತ್ತವರನ್ನು ಕಳೆದುಕೊಂಡ ಮಕ್ಕಳು ಸಾಧ್ಯವಾದಷ್ಟು ಮಟ್ಟಿಗೆ ಅವರ ಸಂಬಂಧೀಕರ ಹಾಗೂ ಸಮುದಾಯದ ಪರಿಸರದಲ್ಲಿ ಬೆಳೆಸಲು ಸೂಕ್ತ ಕಮ್ರಗಳನ್ನು ಕೈಗೊಳ್ಳಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ಸುರಕ್ಷತೆ ಹಾಗೂ ಇನ್ನಿತರ ಅಂಶಗಳ ಬಗ್ಗೆ ನಿಗಾ ಇಡಬೇಕೆಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

       ಪ್ರಕ್ರಿಯೆ ಹೇಗೆ?: ಕೋವಿಡ್​ನಿಂದ ಹೆತ್ತವರನ್ನು ಕಳೆದುಕೊಂಡು ನಿರ್ಗತಿಕರಾದ ಮಕ್ಕಳನ್ನು ಮೊದಲು ಸ್ಥಳೀಯ ಚೈಲ್ಡ್​ಲೈನ್ ಘಟಕ ವಶಕ್ಕೆ ಪಡೆಯಲಿದೆ. ಇದಾದ ಬಳಿಕ 24 ಗಂಟೆ ಗಡುವು ಮೀರದಂತೆ ಸಿಡಬ್ಲ್ಯೂಸಿ ಎದುರು ಹಾಜರುಪಡಿಸಲಿದೆ. ಇಲ್ಲಿ ಎಲ್ಲ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಅವುಗಳು ಹೊಸ ಆಶ್ರಯತಾಣ ಸೇರುತ್ತವೆ. ಈ ಪ್ರಕ್ರಿಯೆ ವಿಳಂಬವಾದಲ್ಲಿ ಚೈಲ್ಡ್​ಕೇರ್ ಸಿಬ್ಬಂದಿ ನಿಗಾದಲ್ಲೇ ಇರಲಿವೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಾಗಲಿ, ಅಸ್ಪಷ್ಟತೆಯಾಗಲಿ ಇಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಕಾನೂನು ವ್ಯಾಪ್ತಿಯಲ್ಲಿ ಮಕ್ಕಳನ್ನು ದತ್ತುಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ.

       ಸತತ ನಿಗಾ: ಮಗುವನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ ಬಳಿಕವೂ ಸಿಡಬ್ಲ್ಯೂಸಿ ಮಗುವಿನ ಮೇಲೆ ನಿಗಾ ಮುಂದುವರಿಸಲಿದೆ. ಹಾಗೆಯೇ ಮಗುವಿನ ಗುರುತನ್ನು ಹೊರಜಗತ್ತಿಗೆ ತಿಳಿಯದಂತೆ ಗೌಪ್ಯವಾಗಿ ಇರಿಸಿ ಪೋಷಿಸುವ ಕಾರ್ಯವೂ ಮುಂದುವರಿಯಲಿದೆ. ಇಂತಹ ಮಕ್ಕಳ ನಿಗಾ ವ್ಯವಸ್ಥೆ ಮಾಡುವಾಗ ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಮಟ್ಟಿಗೆ ಡಿಜಿಟಲ್ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕೋವಿಡ್ ಕಾರಣದಿಂದ ಮಕ್ಕಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆಸುವುದನ್ನು ತಪ್ಪಿಸಿ ಇದ್ದಲ್ಲಿಂದಲೇ ಕೋವಿಡ್ ರಕ್ಷಣಾ ನಿಯಮದಡಿ ಪುನರ್ವಸತಿ ಗೊಳಪಡಿಸುವ ವ್ಯವಸ್ಥೆಯಾಗಬೇಕೆಂದು ಸ್ಪಷ್ಪಪಡಿಸಿದೆ. ಇದಿಷ್ಟೇ ಅಲ್ಲ ಪುನರ್ವಸತಿಗೊಳಪಡುವ ಮಕ್ಕಳ ಪಾಲಕರ ಹೆಸರು, ವಿಳಾಸಗಳನ್ನು ಚೈಲ್ಡ್​ಲೈನ್ (1098) ನಮೂದಿಸಬೇಕೆಂದು ಇಲಾಖೆ ಸೂಚನೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries