ತಿರುವನಂತಪುರಂ: ಕೇರಳದಲ್ಲಿ ಇಂದು 25,820 ಮಂದಿ ಜನರಿಗೆ ಕೊರೋನಾ ದೃಢಪÀಟ್ಟಿದೆ. ಮಲಪ್ಪುರಂ 4074, ಎರ್ನಾಕುಳಂ 2823, ಪಾಲಕ್ಕಾಡ್ 2700, ತಿರುವನಂತಪುರ 2700, ತ್ರಿಶೂರ್ 2506, ಕೊಲ್ಲಂ 2093, ಕೊಝಿಕೋಡ್ 1917, ಆಲಪ್ಪುಳ 1727, ಕೊಟ್ಟಾಯಂ 1322, ಕಣ್ಣೂರು 1265, ಇಡುಕ್ಕಿ 837, ಪತ್ತನಂತಿಟ್ಟು 8ಕಾಸರಗೋಡು 555, ವಯನಾಡ್ 486 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,13,205 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.22.81 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,87,94,256 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳ ಕಾಲ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಇಲ್ಲಿಯವರೆಗೆ, ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಪ್ರಕರಣಗಳನ್ನು ಖಚಿತಪಡಿಸಲಾಗಿತ್ತು. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ. ಕಳೆದ24 ಗಂಟೆÀಗಳಲ್ಲಿ 188 ಮಂದಿ ಸೋಂಕಿನಿಂದ ಮೃತಪಟ್ಟಿರುವುದು ದೃಢಪಡಿಸಲಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 7,358 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 177 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 24,224 ಮಂದಿ ಜನರಿಗೆ ಸೋಂಕು ತಗುಲಿತು. 1328 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3943, ಎರ್ನಾಕುಳಂ 2771, ಪಾಲಕ್ಕಾಡ್ 1805, ತಿರುವನಂತಪುರಂ 2572, ತ್ರಿಶೂರ್ 2493, ಕೊಲ್ಲಂ 2086, ಕೋಝಿಕೋಡ್ 1881, ಆಲಪ್ಪುಳ 1709, ಕೊಟ್ಟಾಯಂ 1217, ಕಣ್ಣೂರು 1168, ಇಡುಕ್ಕಿ 789, ಪತ್ತನಂತಿಟ್ಟು 785, ಕಾಸರಗೋಡು 539, ವಯನಾಡ್ 466 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ. ಇಂದು 91 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ. ಕಣ್ಣೂರು 28, ತಿರುವನಂತಪುರ 11, ಕಾಸರಗೋಡು 10, ಎರ್ನಾಕುಳಂ 9, ಪಾಲಕ್ಕಾಡ್ ಮತ್ತು ವಯನಾಡ್ ತಲಾ 6, ತ್ರಿಶೂರ್, ಪತ್ತನಂತಿಟ್ಟು ತಲಾ 5, ಕೊಲ್ಲಂ ಮತ್ತು ಇಡುಕ್ಕಿಯಲ್ಲಿ ತಲಾ 5 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 37,316 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 4869, ಕೊಲ್ಲಂ 2705, ಪತ್ತನಂತಿಟ್ಟು 1483, ಆಲಪ್ಪುಳ 386, ಕೊಟ್ಟಾಯಂ 1467, ಇಡುಕಿ 1101, ಎರ್ನಾಕುಳಂ 4016, ತ್ರಿಶೂರ್ 4874, ಪಾಲಕ್ಕಾಡ್ 3168, ಮಲಪ್ಪುರಂ 5502, ಕೊಝಿಕ್ಕೋಡ್ 4398, ವಯನಾಡ್ 449, ಕಣ್ಣೂರು 1951, ಕಾಸರಗೋಡು 947 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 2,77,598 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 20,62,635 ಮಂದಿ ಜನರನ್ನು ಗುಣಪಡಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 9,56,865 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,17,798 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 39,067 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 3606 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 877 ಹಾಟ್‍ಸ್ಪಾಟ್‍ಗಳಿವೆ.