ಕಾಸರಗೋಡು: ಕುಂಡಂಗುಳಿ ಶಾಲೆಯ ಎಸ್.ಪಿ.ಸಿ ಕೆಡೆಟ್ ಗಳು ಕೋವಿಡ್ ವಾಕ್ಸಿನ್ ಚಾಲೆಂಜ್ ಗೆ ಸಂಗ್ರಹಿಸಿದ 25 ಸಾವಿರ ರೂ.ಗಳನ್ನು ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಬಂದರು ಸಚಿವರೂ ಆದ ಅಹ್ಮದ್ ದೇವರ್ ಕೋವಿಲ್ ಅವರಿಗೆ ಶನಿವಾರ ಹಸ್ತಾಂತರಿಸಿದರು.
ಈ ಸಂದರ್ಭ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಞಂಬು ಮತ್ತು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಕೆ.ಶ್ರೀಧರನ್, ಎಸ್‍ಪಿಸಿ ಘಟಕಗಳ ಜವಾಬ್ದಾರಿಯ ಶಿಕ್ಷಕರಾದ ಕೆ.ಅಶೋಕನ್, ಕೆ.ವಾಸಂತಿ, ಜಿತಿನ್ ಮೋಹನ್, ಗೋಪಿಕಾ ಕೃಷ್ಣನ್ ಎಂಬವರು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಮೊತ್ತ ಹಸ್ತಾಂತರಿಸಿದರು.