ನವದೆಹಲಿ: ಭಾರತದಲ್ಲಿ ಮೇ 1ರಿಂದ ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಸುಮಾರು 26 ಶೇಕಡ 18-30 ವಯೋಮಾನದವರು ಎಂದು ಕೇಂದ್ರ ಸರಕಾರ ಬುಧವಾರ ಸಂಜೆ ಬಿಡುಗಡೆಗೊಳಿಸಿದ ದತ್ತಾಂಶ ತಿಳಿಸಿದೆ.
ಮೇ 1ರಿಂದ ಮೇ 7ರ ವರೆಗೆ ಕೊರೋನ ಸೋಂಕಿಗೆ ಒಳಗಾದವರಲ್ಲಿ 26.58 ಶೇಕಡ 18ರಿಂದ 30ದ ವರೆಗಿನ ವಯೋಮಾನದವರು. ಮೇ 8ರಿಂದ ಮೇ 14ರ ವರೆಗೆ ಸೋಂಕಿಗೆ ಒಳಗಾದವರಲ್ಲಿ 25.89 ಶೇಕಡ ಇದೇ ವಯೋಮಾನದವರು ಎಂದು ದತ್ತಾಂಶ ತಿಳಿಸಿದೆ. ಮೇ 15ರಿಂದ ಮೇ 21ರ ವರೆಗಿನ ಹೊಸ ಪ್ರಕರಣಗಳಲ್ಲಿ 25.64 ಶೇಕಡ 18ರಿಂದ 30ರ ಒಳಗಿನ ವಯೋಮಾನದವರು.
ಮುಂದಿನ ಮೂರು ದಿನಗಳು ಅಂದರೆ ಮೇ 22ರಿಂದ ಮೇ 25ರ ವರೆಗೆ ಸೋಂಕಿಗೊಳಗಾದವರಲ್ಲಿ 25.60 ಶೇಕಡ 18ರಿಂದ 30ರ ಒಳಗಿನ ಪ್ರಾಯ ಗುಂಪಿನವರು. ಅನಂತರ ಅತಿ ಹೆಚ್ಚು ಸೋಂಕಿಗೊಳಗಾದವರು 31ರಿಂದ 40 ವರ್ಷದೊಳಿಗಿನ ವಯೋಮಾನದವರು. ಮೇ 1ರಿಂದ ಮೇ 7ರ ವರೆಗೆ ಶೇ. 23.12, ಮೇ 8ರಿಂದ ಮೇ 14ರ ವರೆಗೆ ಶೇ. 7,22,79, ಮೇ 15ರಿಂದ ಮೇ 21ರ ವರೆಗೆ ಶೇ. 14,22.58 ಹಾಗೂ ಮೇ 22ರಿಂದ ಮೇ 24ರ ವರೆಗೆ ಶೇ. 22.24 ಈ ವಯೋಮಾನದವರು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ.