ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಜೂನ್ 27ರಂದು ನಡೆಸಲು ಉದ್ದೇಶಿಸಿದ್ದ ನಾಗರಿಕ ಸೇವೆಗಳ ಪ್ರಾಥಮಿಕ (ಪ್ರಿಲಿಮನರಿ) ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ಮುಂದೂಡಿದ್ದು, ಅದು ಅಕ್ಟೋಬರ್ 10ರಂದು ನಡೆಯಲಿದೆ.
'ಸದ್ಯದ ಕೋವಿಡ್ ಪರಿಸ್ಥಿತಿಗಳಿಂದಾಗಿ ಜೂನ್ 27ರಂದು ನಡೆಯಬೇಕಿದ್ದ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಅಕ್ಟೋಬರ್ 10ರಂದು ಈ ಪರೀಕ್ಷೆ ನಡೆಯಲಿದೆ' ಎಂದು ಆಯೋಗವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಇತರ ಇಲಾಖೆಗಳ ಅಧಿಕಾರಿಗಳ ನೇಮಕಾತಿಗಾಗಿ ಮೂರು ಹಂತಗಳಲ್ಲಿ (ಪ್ರಾಥಮಿಕ, ಪ್ರಧಾನ ಪರೀಕ್ಷೆ, ಸಂದರ್ಶನ) ಆಯೋಗವು ಪರೀಕ್ಷೆಗಳನ್ನು ನಡೆಸುತ್ತದೆ.