ತಿರುವನಂತಪುರ: ಕೇರಳದಲ್ಲಿ ಇಂದು 28,514 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 3932, ತಿರುವನಂತಪುರ 3300, ಎರ್ನಾಕುಳಂ 3219, ಪಾಲಕ್ಕಾಡ್ 3020, ಕೊಲ್ಲಂ 2423, ತ್ರಿಶೂರ್ 2404, ಆಲಪ್ಪುಳ 2178, ಕೋಝಿಕೋಡ್ 1971, ಕೊಟ್ಟಾಯಂ 1750, ಕಣ್ಣೂರು 1252, ಇಡುಕಿ 987, ಪತ್ತನಂತಿಟ್ಟು 877, ಕಾಸರಗೋಡು 702, ವಯನಾಡ್ 499 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,26,028 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.22.63. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,86,81,051 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಜನರಿಗೆ ಈವರೆಗೆ ಸೋಂಕು ದೃಢÀಪಡಿಸಲಾಗಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 176 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆ 7170 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 214 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 26,347 ಮಂದಿ ಜನರಿಗೆ ಸೋಂಕು ತಗುಲಿತು. 1830 ಮಂದಿಯ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3720, ತಿರುವನಂತಪುರಂ 3110, ಎರ್ನಾಕುಳಂ 3109, ಪಾಲಕ್ಕಾಡ್ 1789, ಕೊಲ್ಲಂ 2411, ತ್ರಿಶೂರ್ 2395, ಆಲಪ್ಪುಳ 2162, ಕೋಝಿಕೋಡ್ 1911, ಕೊಟ್ಟಾಯಂ 1632, ಕಣ್ಣೂರು 1133, ಇಡುಕ್ಕಿ 972, ಪತ್ತನಂತಿಟ್ಟು 841,ಕಾಸರಗೋಡು 684,ವಯನಾಡ್ 478 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 123 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಖಚಿತಪಡಿಸಲಾಗಿದೆ. ಕಣ್ಣೂರು 25, ಪಾಲಕ್ಕಾಡ್ 22, ಕಾಸರಗೋಡು 17, ವಯನಾಡ್ ತಲಾ 10, ಕೊಲ್ಲಂ, ಎರ್ನಾಕುಳಂ ತಲಾ 9, ತಿರುವನಂತಪುರ, ಪತ್ತನಂತಿಟ್ಟು, ಕೋಝಿಕೋಡ್ ತಲಾ 7 , ತ್ರಿಶೂರ್ 5, ಕೊಟ್ಟಾಯಂ 2, ಆಲಪ್ಪುಳ, ಇಡಕ್ಕಿ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.
ಚಿಕಿತ್ಸೆಯಲ್ಲಿರುವ 45,400 ಮಂದಿ ಜನರಿಗೆ ಸೋಂಕು ಮುಕ್ತರಾಗಿದ್ದಾರೆ. ತಿರುವನಂತಪುರ 4525, ಕೊಲ್ಲಂ 2120, ಪತ್ತನಂತಿಟ್ಟು 1616, ಆಲಪ್ಪುಳ 2619, ಕೊಟ್ಟಾಯಂ 2290, ಇಡುಕಿ 1094, ಎರ್ನಾಕುಳಂ 8296, ತ್ರಿಶೂರ್ 7353, ಪಾಲಕ್ಕಾಡ್ 3360, ಮಲಪ್ಪುರಂ 4555, ಕೊಝಿಕೋಡ್ 3928, ವಯನಾಡ್ 487, ಕಣ್ಣೂರು 2253, ಕಾಸರಗೋಡು 904 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,89,283 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 20,25,319 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 9,69,946 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,31,203 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 38,743 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3383 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 877 ಹಾಟ್‍ಸ್ಪಾಟ್‍ಗಳಿವೆ.