HEALTH TIPS

ಜುಲೈ ವೇಳೆಗೆ ಕೋವಿಡ್ ಸೋಂಕು ಪ್ರಮಾಣ 2 ನೇ ಅಲೆಗೂ ಮುಂಚಿದ್ದ ಪರಿಸ್ಥಿತಿಗೆ ಇಳಿಕೆ ಸಾಧ್ಯತೆ!

Top Post Ad

Click to join Samarasasudhi Official Whatsapp Group

Qries

         ನವದೆಹಲಿ: ಜಲೈ ವೇಳೆಗೆ 2 ನೇ ಅಲೆಗೂ ಮುಂಚಿದ್ದ ಪರಿಸ್ಥಿತಿಗೆ ಕೋವಿಡ್ ಸೋಂಕು ಪ್ರಸರಣ ಇಳಿಕೆಯಾಗಲಿದೆ ಎಂದು ಐಐಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಗಣಿತದ ಮಾದರಿಯಿಂದ ವಿಶ್ಲೇಷಿಸಿದ್ದಾರೆ.

         ಜುಲೈ 3 ರ ವೇಳೆಗೆ ಫೆಬ್ರವರಿ ತಿಂಗಳಲ್ಲಿದ್ದ 12,780 ಕ್ಕೆ ಕೋವಿಡ್-19 ಸೋಂಕು ಪ್ರಕರಣಗಳಿಗೆ (7 ದಿನಗಳ ಸರಾಸರಿ) ಇಳಿಕೆಯಾಗಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

       ಭಾರತದಲ್ಲಿ ಭಾನುವಾರ 2,40,842 ಹೊಸ ಪ್ರಕರಣಗಳು ವರದಿಯಾಗಿತ್ತು. ಇದು ಏಪ್ರಿಲ್ 17 ರಿಂದ ಇದೇ ಮೊದಲ ಬಾರಿಗೆ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಏ.17 ರಂದು 2.34 ಲಕ್ಷ ಪ್ರಕರಣಗಳು ವರದಿಯಾಗಿತ್ತು.

       ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳು 28,05,399 ಕ್ಕೆ ಇಳಿಕೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ 1,18,001 ಪ್ರಕರಣಗಳು ಇಳಿಕೆಯಾಗಿತ್ತು. ಫೆಬ್ರವರಿ ತಿಂಗಳಲ್ಲಿ ಏರಿಕೆ ಕಾಣಲು ಪ್ರಾರಂಭಿಸಿದ ಕೋವಿಡ್-19 ಸೋಂಕು ಏ.17 ರ ವೇಳೆಗೆ 1 ಲಕ್ಷ ದಾಟಿತ್ತು.

       ಮೇ.13 ರ ವೇಳೆಗೆ ಭಾರತದಲ್ಲಿ ಸಕ್ರಿಯ ಸೋಂಕುಗಳ ಪ್ರಕರಣ 37.2 ಲಕ್ಷಕ್ಕೆ ತಲುಪಿತ್ತು. ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್, ಸಮಗ್ರ ರಕ್ಷಣಾ ಸಿಬ್ಬಂದಿ (ವೈದ್ಯಕೀಯ) ವಿಭಾಗದ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಹಾಗೂ ಐಐಟಿ ಹೈದ್ರಾಬಾದ್ ನ ಪ್ರೊಫೆಸರ್ ಮತುಕುಮಲ್ಲಿ ವಿದ್ಯಾಸಾಗರ್, ಅವರು ರಚಿಸಿರುವ (SUTRA) ಸಸ್ಪೆಕ್ಟೆಬಲ್, ಅನ್ ಡಿಟೆಕ್ಟೆಡ್, ಟೆಸ್ಟೆಡ್ (ಪಾಸಿಟಿವ್) ಹಾಗೂ ರಿಮೂವ್ಡ್ ಅಪ್ರೋಚ್ ಮಾದರಿಯ ಮೂಲಕ, ಅತಿ ಹೆಚ್ಚು ಪ್ರಕರಣಗಳಿದ್ದ ರಾಜ್ಯಗಳಲ್ಲಿ ಈಗ ಕೋವಿಡ್-19 ಸೋಂಕು ಸ್ಥಿರವಾಗುತ್ತಿದೆ ಎಂದು ತಿಳಿದುಬಂದಿದೆ.

"ತಮಿಳುನಾಡಿನಲ್ಲಿ ಕೋವಿಡ್-19 ಪ್ರಸರಣ ದರ ಶೇ.20 ರಷ್ಟು ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಲಾಕ್ ಡೌನ್ ನಿಂದ ಕೋವಿಡ್-19 ಸೋಂಕು ಗಮನಾರ್ಹವಾಗಿ ಕಡಿಮೆಯಾಗಿದೆ" ಪ್ರೊಫೆಸರ್ ಅಗರ್ವಾಲ್ ಹೇಳಿದ್ದಾರೆ. ಕೋವಿಡ್-19 ಅಂಕಿ-ಅಂಶಗಳ ಆಧಾರವಾಗಿ ಈ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries