ತಿರುವನಂತಪುರ: ಕೊರೋನಾ ಲಸಿಕೆ ಪಡೆದವರು ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಸುದ್ದಿ ಎಂದು ಕೇರಳ ಪೋಲೀಸರು ಮಾಹಿತಿ ನೀಡಿದ್ದಾರೆ. ಅಧಿಕೃತ ಫೇಸ್‍ಬುಕ್ ಪುಟದ ಮೂಲಕ ಹರಡಿರುವುದು ಸುಳ್ಳು ಎಂದು ಪೋಲೀಸರು ತಿಳಿಸಿದ್ದಾರೆ. ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಫ್ರೆಂಚ್ ನೊಬೆಲ್ ಪ್ರಶಸ್ತಿ ವಿಜೇತರ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ವೈರಸ್‍ಗಿಂತ ನಕಲಿ ಸಂದೇಶಗಳು ಹೆಚ್ಚು ಅಪಾಯಕಾರಿ ಎಂದು ಪೋಲೀಸರು ತಿಳಿಸಿದ್ದಾರೆ.
ಫೇಸ್‍ಬುಕ್ ಪೋಸ್ಟ್‍ನ ಪೂರ್ಣ ಆವೃತ್ತಿ:
ನಕಲಿ ಸಂದೇಶಗಳನ್ನು ಹರಡಬೇಡಿ. ವೈರಸ್‍ಗಿಂತ ತಪ್ಪು ಮಾಹಿತಿ ಹೆಚ್ಚು ಅಪಾಯಕಾರಿ. ಲಸಿಕೆ ಪಡೆದವರು ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ಸಂದೇಶ ಸುಳ್ಳು. ಫ್ರೆಂಚ್ ನೊಬೆಲ್ ಪ್ರಶಸ್ತಿ ಪುರಸ್ಕøತರ ಹೆಸರಿನಲ್ಲಿ ಲಸಿಕೆ ಬಗ್ಗೆ ನಕಲಿ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಂತಹ ಸಂದೇಶಗಳನ್ನು ಹರಡಬೇಡಿ. ವೈರಸ್‍ಗಿಂತ ತಪ್ಪು ಮಾಹಿತಿ ಹೆಚ್ಚು ಅಪಾಯಕಾರಿ. ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ.