ತಿರುವನಂತಪುರ: ಕಾಸರಗೋಡು ಅರೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಾಗಿ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹಡ್ಕೊ) 3,000 ಕೋಟಿ ರೂ. ಸಾಲ ಮಂಜೂರು ಮಾಡಿದೆ. ತಿರುವನಂತಪುರ ಕೊಚುವೇಲಿಯಿಂದ ಚೆಂಗನ್ನೂರಿನವರೆಗೆ ಸಿಲ್ವರ್ ಲೈನ್ ರಸ್ತೆಗೆ ಮೊದಲ ಹಂತದ ಭೂಸ್ವಾಧೀನಕ್ಕಾಗಿ ಹಡ್ಕೊ ವಾರ್ಷಿಕ 8 ಶೇ. ಬಡ್ಡಿದರದಲ್ಲಿ ಸಾಲವನ್ನು ಮಂಜೂರು ಮಾಡಿದೆ.
ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುವು ಮಾಡಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಉದ್ಯಮವಾದ ಕೇರಳ ರೈಲ್ವೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್‍ಡಿಸಿಎಲ್) ನ್ನು ರಚಿಸಲಾಗಿದೆ. ಕೆ.ಆರ್.ಡಿ.ಸಿ.ಎಲ್ ಹೈಸ್ಪೀಡ್ ರೈಲು ಕಾರಿಡಾರನ್ನು ನಿರ್ಮಿಸಲಿದೆ.ಹೈಸ್ಪೀಡ್ ರೈಲು ಕಾರಿಡಾರ್: ಭೂಸ್ವಾಧೀನಕ್ಕಾಗಿ ಹಡ್ಕೊದಿಂದ 3,000 ಕೋಟಿ ರೂ ಮಂಜೂರು
0
ಮೇ 21, 2021
Tags