ಭುವನೇಶ್ವರ; ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಅನಾಹುತ ತಪ್ಪಿಸಲು ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಜನರನ್ನು ನಿರಾಶ್ರಿತರ ತಾಣಗಳಿಗೆ ರವಾನಿಸಲಾಗಿದೆ. ಎರಡೂ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಚಂಡಮಾರುತ ಗಂಟೆಗೆ 145 ಕಿಮೀ ವೇಗದಲ್ಲಿ ಬೀಸುತ್ತಿದೆ.
ಇಂತಹ ಯಾಸ್ ಚಂಡಮಾರುತ ಇಷ್ಟು ಅನಾಹುತ ಸೃಷ್ಟಿಸಿದರೂ ಯಾಸ್ ಜನರಲ್ಲಿ ಕ್ರೇಜ್ ಸೃಷ್ಟಿಸಿದೆ. ಹೌದು, ಒಡಿಶಾದ ಪೂರ್ವ ಮೇದನಿಪುರದಲ್ಲಿ ತೆರೆಯಲಾಗಿರುವ ನಿರಾಶ್ರಿತ ತಾಣಗಳಿಗೆ ಸುಮಾರು 6000 ಗರ್ಭಿಣಿಯರನ್ನೂ ದಾಖಲಿಸಲಾಗಿದೆ. ಇದರಲ್ಲಿ ಸುಮಾರು 600 ಜನರಿಗೆ ಹೆರಿಗೆ ಆಗಿದ್ದು, ಸುಮಾರು 300 ಮಕ್ಕಳಿಗೆ ಯಾಸ್ ಎಂದು ಹೆಸರಿಡಲಾಗಿದೆ.
ಯಾಸ್ ಎಂದು ಹೆಸರಿಟ್ಟವರ ಸಂಖ್ಯೆ ಇನ್ನೂ ಹೆಚ್ಚಿದೆ. ಆದರೆ ಅಧಿಕೃತವಾಗಿ ಗೊತ್ತಾಗಿರುವುದು 300 ಜನ ಎಂದು ಹೇಳಲಾಗಿದೆ. ಪೂರ್ವ ಮೇದನಿಪುರದಲ್ಲಿ ಗರ್ಬಿಣಿಯರಿಗೆ ಆರೈಕೆ ಕೇಂದ್ರ ತೆರೆಯಲಾಗಿದೆ.
ಅಷ್ಟಕ್ಕೂ ಯಾಸ್ ಚಂಡಮಾರುತಕ್ಕೆ ಹೆಸರಿಟ್ಟಿರುವುದು ಯೆಮೆನ್ ದೇಶ. ಯಾಸ್ ಎಂಬುದು ಪರ್ಶಿಯನ್ ಭಾಷೆಯಾಗಿದೆ. ಪರ್ಶಿಯನ್ ನಲ್ಲಿ ಯಾಸ್ ಎಂದರೆ ಮಲ್ಲಿಗೆ ಎಂಬ ಅರ್ಥವಿದೆಯಂತೆ.