ತಿರುವನಂತಪುರ: ಕೇರಳದಲ್ಲಿ iಒಜu 32,680 mಒಜi ಜನರಿಗೆ ಕೋವಿಡ್ ಖಚಿತಠಿತಿisಟಂgiಜe. ಮಲಪ್ಪುರಂ 4782, ಎರ್ನಾಕುಐಂ 3744, ತ್ರಿಶೂರ್ 3334, ತಿರುವನಂತಪುರ 3292, ಪಾಲಕ್ಕಾಡ್ 3165, ಕೋಝಿಕೋಡ್ 2966, ಕೊಲ್ಲಂ 2332, ಕೊಟ್ಟಾಯಂ 2012, ಆಲಪ್ಪುಳ 1996, ಕಣ್ಣೂರು 1652, ಪತ್ತನಂತಿಟ್ಟು 1119, ಕಾಸರಗೋಡು 847, ಇಡುಕ್ಕಿ 737, ವಯನಾಡ್ 702 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,22,628 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.26.65. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,78,12,355 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಮಂದಿ ಜನರಿಗೆ ಸೋಂಕು ಈವರೆಗೆ ದೃಢಪಡಿಸಲಾಗಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 96 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದಾಗಿ ಸರ್ಕಾರ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ 6339 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 296 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 29,969 ಮಂದಿ ಜನರಿಗೆ ಸೋಂಕು ತಗುಲಿತು. 2316 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 4521, ಎರ್ನಾಕುಳಂ 3620, ತ್ರಿಶೂರ್ 3272, ತಿರುವನಂತಪುರಂ 3097, ಪಾಲಕ್ಕಾಡ್ 1643, ಕೋಝಿಕೋಡ್ 2926, ಕೊಲ್ಲಂ 2321, ಕೊಟ್ಟಾಯಂ 1762, ಆಲಪ್ಪುಳ 1993, ಕಣ್ಣೂರು 1500, ಪತ್ತನಂತಿಟ್ಟು 1081, ಕಾಸರಗೋಡು 827, ಇಡುಕ್ಕಿ 715, ವಯನಾಡ್ 691 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 99 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 30, ಕಾಸರಗೋಡು 13, ತ್ರಿಶೂರ್, ಪಾಲಕ್ಕಾಡ್, ವಯನಾಡ್ 9, ಎರ್ನಾಕುಳಂ 8, ತಿರುವನಂತಪುರ, ಕೊಲ್ಲಂ, ಕೋಝಿಕೋಡ್ ತಲಾ 5, ಪತ್ತನಂತಿಟ್ಟು, ಕೊಟ್ಟಾಯಂ ಮತ್ತು ಇಡುಕಿ ತಲಾ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ಒಟ್ಟು 29,442 ಮಂದಿ ಜನರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 2912, ಕೊಲ್ಲಂ 1765, ಪತ್ತನಂತಿಟ್ಟು 976, ಆಲಪ್ಪುಳ 1509, ಕೊಟ್ಟಾಯಂ 2190, ಇಡುಕ್ಕಿ 691, ಎರ್ನಾಕುಳಂ 3065, ತ್ರಿಶೂರ್ 2742, ಪಾಲಕ್ಕಾಡ್ 3012, ಮಲಪ್ಪುರಂ 3669, ಕೋಝಿಕೋಡ್ 4725, ವಯನಾಡ್ 458, ಕಣ್ಣೂರು 1504, ಕಾಸರಗೋಡು 224 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 4,45,334 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 16,66,232 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 10,31,271 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,94,204 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 37,067 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 3974 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 9 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 852 ಹಾಟ್‍ಸ್ಪಾಟ್‍ಗಳಿವೆ.