ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 363991 ಮಂದಿಯಿಂದ ವಾಕ್ಸಿನೇಷನ್ ಸ್ವೀಕರಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ವಾಕ್ಸಿನೇಷನ್ ಪ್ರಕ್ರಿಯೆ ಮುಂದುವರಿಯುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿಗೆ ಲಸಿಕೆ ನೀಡಿಕೆ ನಡೆಯುತ್ತಿದೆ. ಕೋವೀಷೀಲ್ಡ್, ಕೋವಾಕ್ಸೀನ್ ಲಸಿಕೆ ನೀಡಲಾಗುತ್ತಿದೆ.
ಜಿಲ್ಲೆಯ ಆರೋಗ್ಯ ಕಾರ್ಯಕರ್ತರಲ್ಲಿ 10,329 ಮಂದಿಗೆ ಮೊದಲ ಡೋಸ್, 8,163 ಮಂದಿಗೆ ದ್ವಿತೀಯ ಡೋಸ್ ನೀಡಲಾಗಿದೆ. ಕೋವಿಡ್ ಮುಂಚೂಣಿ ಹೋರಾಟಗಾರರಲ್ಲಿ 24,110 ಮಂದಿಗೆ ಮೊದಲ ಡೋಸ್, 18,153 ಮಂದಿಗೆ ದ್ವಿತೀಯ ಡೋಸ್ ನೀಡಲಾಗಿದೆ. ಸಾರ್ವಜನಿಕ ವಲಯದ 2,46,796 ಮಂದಿಗೆ ಮೊದಲ ಡೋಸ್, 56,440 ಮಂದಿ ದ್ವಿತೀಯ ಡೋಸ್ ಸ್ವೀಕರಿಸಿದ್ದಾರೆ.