ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ (ಮೇ 27 ವರೆಗೆ) ಒಟ್ಟು 365848 ಮಂದಿಯಿಂದ ಕೋವಿಡ್ ವಾಕ್ಸಿನ್ ಸ್ವೀಕರಿಸಿದ್ದಾರೆ.
ಇವರಲ್ಲಿ 283089 ಮಂದಿ ಮೊದಲ ಡೋಸ್, 82759 ಮಂದಿ ದ್ವಿತೀಯ ಡೋಸ್ ವಾಕ್ಸಿನ್ ಪಡೆದಿರುವರು. ಆರೋಗ್ಯ ಕಾರ್ಯಕರ್ತರಲ್ಲಿ 10329 ಮಂದಿ ಮೊದಲ ಡೋಸ್, 8163 ಮಂದಿ ದ್ವಿತೀಯ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. ಕೋವಿಡ್ ಮುಂಚೂಣಿ ಕಾರ್ಯಕರ್ತರಲ್ಲಿ 24110 ಮಂದಿ ಮೊದಲ ಡೋಸ್, 18153 ಮಂದಿ ದ್ವಿತೀಯ ಡೋಸ್ ಪಡೆದರು. ಸಾರ್ವಜನಿಕ ವಿಭಾಗದಲ್ಲಿ 248650 ಮಂದಿ ಮೊದಲ ಡೋಸ್, 56443 ಮಂದಿ ದ್ವಿತೀಯ ಡೋಸ್ ಪಡೆದಿರುವರು.