HEALTH TIPS

ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ಸಭೆ : 370 ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಗಳ ತುರ್ತು ಖರೀದಿಗೆ ತೀರ್ಮಾನ

                               

          ಕಾಸರಗೋಡು: ಕೋವಿಡ್-19 ಚಿಕಿತ್ಸೆಗಾಗಿ ಕಾಸರಗೋಡು ಜಿಲ್ಲೆಗೆ ಪ್ರತಿದಿನ ಹೆಚ್ಚುವರಿ ಅಗತ್ಯವಿರುವ 370 ಮೆಡಿಕಲ್ ಸಿಲಿಂಡರ್ ಗಳನ್ನು ತುರ್ತಾಗಿ ಖರೀದಿಸಲು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ಸಭೆ ನಿರ್ಧರಿಸಿದೆ.  

               ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ವೈದ್ಯಾದಿಕಾರಿಗೆ ಹೊಣೆ ನೀಡಲಾಗಿದೆ. ಪ್ರತಿದಿನ 300 ಸಿಲಿಂಡರ್ ಮೆಡಿಕಲ್ ಆಕ್ಸಿಜನ್ ಕಣ್ಣೂರು ಬಲ್ಕೋ ಸಂಸ್ಥೆಯಿಂದ ತರಸಲಾಗುತ್ತಿದೆ. ವಿವಿಧ ಆಸ್ಪತ್ರೆಗಳಲ್ಲಿ ಸದ್ರ ಇರುವ 370 ಆಕ್ಸಿಜನ್ ಸಿಲಿಂಡರ್ ಗಳನ್ನು ಬಳಸುತ್ತಿರುವ ವೇಲೆಯೇ 370 ಸಿಲಿಂಡರ್ ಗಳನ್ನು ರೀಫಿಲ್ ನಡೆಸಿ ಕಾಯ್ದಿರಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಅಗತ್ಯದ ಸಿಲಿಂಡರ್ ಗಳನ್ನು ತುರ್ತಾಗಿ ಖರೀದಿಸಲಾಗುವುದು. 

              ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಆಕ್ಸಿಜನ್ ಲೆವೆಲ್ ಸತತ ತಪಾಸಣೆ ನಡೆಸುವ ನಿಟ್ಟಿನಲ್ಲಿ ತುರ್ತಾಗಿ 2 ಸಾವಿರ ಪಲ್ಸ್ ಆಕ್ಸಿಮೀಟರ್ ಖರೀದಿಸಲು ಜಿಲ್ಲಾ ವೈದ್ಯಾಧಿಕಾರಿ ಕ್ರಮ ಕೈಗೊಳ್ಳುವರು. ಇದಕ್ಕಾಗಿ ಜಿಲ್ಲಾ ಪಂಚಾಯತ್ ನಿಧಿ ಒದಗಿಸಿದೆ. 

             ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ಸಜ್ಜುಗೊಳಿಸದೇ ಇರುವ ಖಾಸಗಿ ಆಸ್ಪತ್ರೆಗಳ ಎಲ್ಲ ಸೌಲಭ್ಯಗಳನ್ನೂ ಸರಕಾರ ವಹಿಸಿಕೊಳ್ಳಲಿದೆ ಎಂದು ಸಭೆ ತಿಳಿಸಿದೆ. ಕಾಸರಗೋಡಿನ ಪ್ರಮುಖ ಆಸ್ಪತ್ರೆಯೊಂದನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲು ಕ್ರಮಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. 

                 ಪಂಚಾಯತ್ ಮಟ್ಟದಲ್ಲಿ ಡೊಮಿಸಿಲರಿ ಕೇರ್ ಸೆಂಟರ್(ಡಿ.ಸಿ.ಸಿ.) ಗಳನ್ನು ಆರಂಭಿಸಲಾಗುವುದು. ಇದಕ್ಕಿರುವ ಸಜ್ಜೀಕರಣಗಳನ್ನು ಆಯಾ ಸ್ಥಳೀಯಾಡಳಿತೆ ಸಂಸ್ಥೆಗಳು ನಡೆಸಬೇಕು. ಇದಕ್ಕಿರುವ ಸಹಾಯಗಳನ್ನು ಸ್ಥಳೀಯಾಡಳಿತೆ ಸಂಸ್ಥೆಗಳು ಸಂಘ-ಸಂಸ್ಥೆಗಳಿಂದ, ವ್ಯಕ್ತಿಗಳಿಂದ ಪಡೆಯಬಹುದು. ದೇಣಿಗೆ  ಪಡೆದು ಯಾ ಸ್ವಂತ ನಿಧಿ ಬಳಸಿ ಕಟ್ಟಡ ಸಔಲಭ್ಯವಿಲ್ಲದೆಡೆ ತಾತ್ಕಾಲಿಕ ಸೌಲಭ್ಯ ಏರ್ಪಡಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. 

                  ಜಿಲ್ಲೆಯಲ್ಲಿ ಸದ್ರಿ 27 ಇನ್ ವೆನ್ಸೀವ್, 27 ನಾನ್ ಇನ್ವೆನ್ಸೀವ್, ಹೀಗೆ ಒಟ್ಟು 54 ವೆಂಟಿಲೇಟರ್ ಗಳಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ವರದಿ ಮಾಡಿದ್ದಾರೆ. ಮೆಡಿಕಲ್ ಕಾಲೇಜು ಆಸಪತ್ರೆ 17, ಟಾಟಾ ಕೋವಿಡ್ ಆಸ್ಪತ್ರೆ 13, ಕಾಞಂಗಾಡು ಜಿಲ್ಲಾ ಆಸ್ಪತ್ರೆ 15, ಕಾಸರಗೊಡು ಜನರಲ್ ಆಸ್ಪತ್ರೆ 9 ಹೀಗೆ ನಾನ್ ಇನ್ವೆ ನ್ಸೀವ್ ವೆಂಟಿಲೇಟರ್ ಗಳು ಬಳಕೆಯಲ್ಲಿವೆ. ಇನ್ವೆಂಟೀವ್ ವೆಂಟಿಲೇಟರ್ ಗಳಲ್ಲಿ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ 2 ಮಾತ್ರ ಬಳಕೆಯಲ್ಲಿದೆ. ಅಗತ್ಯವಿರುವ ಆಕಲ್ಸಿಜನ್ ಲಭಿಸಿದರೆ ಟಾಟಾ ಕೋವಿಡ್ ಆಸ್ಪತ್ರೆಯ 40 ಆಕ್ಸಿಜನ್ ಬೆಡ್ ಗಳಲ್ಲಿ ದಾಖಲಾತಿ ಚಿಕಿತ್ಸೆ ನೀಡಬಹುದಾಗಿದೆ ಎಂದವರು ತಿಳಿಸಿದರು. 

           ಈ ವಿಷಯ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದ್ದು, ಕಣ್ಣೂರಿನಿಂದ ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಗಳನ್ನು ತರಿಸುವ ಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು. ಜಿಲ್ಲೆಯ ರೋಗಿಗಳಿಗೆ ಜಿಲ್ಲೆಯಲ್ಲೇ ಚಿಕಿತ್ಸೆ ಸೌಲಭ್ಯ ನೀಡಬೇಕು ಎಂದವರು ಆದೇಶಿಸಿದರು. 

                 ಅತಿ ಕಡಿಮೆ ಅವಧಿಯಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು, ನೂತನ ರೂಪು ತಳೆದಿಒರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಪರ್ಕ ಪಡೆಯುವ ಇತರರಿಗೂ ಪಾಸಿಟಿವ್ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದ ಕಾರಣ ಮನೆಯ ಎಲ್ಲ ಸದಸ್ಯರೂ ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು. ವಾರ್ಡ್ ಮಟ್ಟದ ಜನಜಾಗೃತಿ ಸಮಿತಿ ಯಾ ಆರ್.ಆರ್.ಟಿ. ಇವರ ಮನೆಗಳಿಗೆ ಅಗತ್ಯದ ಸಾಮಾಗ್ರಿಗಳನ್ನು ತಲಪಿಸಬೇಕು ಎಂದು ಸಭೆ ತಿಳಿಸಿದೆ. 

              ಸ್ಥಳೀಯಾಡಳಿತೆ ಸಂಸ್ಥೆಗಳು ಆಯಾ ಸಂಸ್ಥೆಗಳ ವ್ಯಾಪ್ತಿಯ ನಿವಾಸಿಗಳಾದ ಅನಿವಾರ್ಯ ಸೇವೆ ಹೊರತುಪಡಿಸಿ ಇತರ ಸಿಬ್ಬಂದಿಯನ್ನು ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ನೇಮಕಗೊಳಿಸಬಹುದು. ಮಾಸ್ಟರ್ ಯೋಜನೆಯ ಶಿಕ್ಷಕರಿಗೆ ಇತರ ಕರ್ತವ್ಯ ನೀಡಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries