ಕೊಚ್ಚಿ: ಕೊರೋನಾ ಚಿಕಿತ್ಸೆಗೆ ಭಾರಿ ಶುಲ್ಕ ವಿಧಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ರೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲುವಾ ಅನ್ವರ್ ಸ್ಮಾರಕ ಆಸ್ಪತ್ರೆ ವ್ಯಾಪಕ ದೂರುಗಳಿಗೆ ಕಾರಣವಾಗಿದೆ. ತ್ರಿಶೂರ್ ನ ರೋಗಿಗೆ ಐದು ದಿನಗಳವರೆಗೆ ಪಿಪಿಇ ಕಿಟ್ ಗಾಗಿ 37,352 ರೂ.ವಿಧಿಸಲಾಗಿದೆ. ಇದರ ವಿರುದ್ಧ ಯುವಕನೋರ್ವ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ.
10 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಆನ್ಸನ್ ತೆರಳುವಾಗ 1,67,381 ರೂ.ಬಿಲ್ ನೀಡಲಾಗಿತ್ತು. ಈ ಬಗ್ಗೆ ಕಳವಳಗೊಂಡ ಅನ್ಸನ್ ಪೋಲೀಸರು ಮತ್ತು ಡಿಎಂಒಗೆ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತ್ರಿಶೂರ್ ನ ಮತ್ತೊಬ್ಬ ಕೊರೋನಾ ರೋಗಿಗೆ ಇದೇ ರೀತಿಯ ಅನುಭವವಾಗಿದೆ. ಅವರಿಗೆ ಕೇವಲ ಐದು ದಿನಗಳಿಗೆ 67,880 ರೂ.ಬಿಲ್ ನೀಡಲಾಗಿದೆ. ಈ ಪೈಕಿ ಪಿಪಿಇ ಕಿಟ್‍ಗೆ ಕೇವಲ 37,572 ರೂ. ವಿಧಿಸಿರುವುದು ಗಮನಾರ್ಹವಾಗಿದೆ.
ಕಳೆದ ಕೆಲವು ದಿನಗಳಲ್ಲಿ, ಕೊರೋನಾ ಚಿಕಿತ್ಸೆಗೆ ಅತಿಯಾದ ದರವನ್ನು ವಿಧಿಸುವುದಕ್ಕಾಗಿ ರಾಜ್ಯದ ಖಾಸಗಿ ಆಸ್ಪತ್ರೆಗಳನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಸರ್ಕಾರವು ಈ ನಿಟ್ಟಿನಲ್ಲಿ ಸಮಯೋಚಿತವಾಗಿ ನೀತಿಯನ್ನು ರೂಪಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಕೊರೋನಾ ಚಿಕಿತ್ಸೆಯ ಸೋಗಿನಲ್ಲಿ ಲಾಭ ಗಳಿಸುವ ಪ್ರಯತ್ನವನ್ನೂ ನ್ಯಾಯಾಲಯ ಟೀಕಿಸಿತ್ತು.
ಖಾಸಗಿ ಆಸ್ಪತ್ರೆಗಳು ಅತಿಯಾದ ದರವನ್ನು ವಿಧಿಸುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಶುಲ್ಕಗಳನ್ನು ಎಳೆದೆಳೆದು ಹಲವು ವಿಷಯಗಳನ್ನು ಉಲ್ಲೇಖಿಸಿ ದುಬಾರಿಗೊಳಿಸಿವೆ. ಆಸ್ಪತ್ರೆಯು ಪ್ರತಿ ರೋಗಿಗೆ ದಿನಕ್ಕೆ ಎರಡು ಪಿಪಿಇ ಕಿಟ್‍ಗಳನ್ನು ವಿಧಿಸುತ್ತದೆ. ಹತ್ತು ವ್ಯಕ್ತಿಗಳ ವಾರ್ಡ್‍ನಲ್ಲಿ ಪ್ರತಿ ರೋಗಿಗೆ ಯಾವುದೇ ಪಿಪಿಇ ಕಿಟ್ ವಿಧಿಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.