ತಿರುವನಂತಪುರ: ಕೇರಳದಲ್ಲಿ ಇಂದು 39,955 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾದೆ. ಮಲಪ್ಪುರಂ 5044, ಎರ್ನಾಕುಳಂ 5026, ತಿರುವನಂತಪುರ 4050, ಕೊಲ್ಲಂ 3731, ತ್ರಿಶೂರ್ 3587, ಕೋಝಿಕೋಡ್ 3346, ಪಾಲಕ್ಕಾಡ್ 3223, ಕೊಟ್ಟಾಯಂ 2771, ಆಲಪ್ಪುಳ 2709, ಕಣ್ಣೂರು 2261, ಪತ್ತನಂತಿಟ್ಟುÀ 1301, ಇಡುಕ್ಕಿ 1236, ಕಾಸರಗೋಡು 883, ವಯನಾಡ್ 787 ಎಂಬಂತೆ ಸೋಂಕು ದೃಢಪಡಿಸಲಾಗಿದೆ. .
ಕಳೆದ 24 ಗಂಟೆಗಳಲ್ಲಿ 1,39,656 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.28.61 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,75,58,352 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿರುವ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 97 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 6,150 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 217 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 36,841 ಮಂದಿ ಜನರಿಗೆ ಸೋಂಕು ತಗುಲಿತು. 2788 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 4834, ಎರ್ನಾಕುಳಂ 4928, ತಿರುವನಂತಪುರ 3803, ಕೊಲ್ಲಂ 3725, ತ್ರಿಶೂರ್ 3562, ಕೋಝಿಕೋಡ್ 3237, ಪಾಲಕ್ಕಾಡ್ 1214, ಕೊಟ್ಟಾಯಂ 2590, ಆಲಪ್ಪುಳ 2704, ಕಣ್ಣೂರು 2130, ಪತ್ತನಂತಿಟ್ಟು 1280, ಇಡುಕ್ಕಿ 1208, ಕಾಸರಗೋಡು 858, ವಯನಾಡ್ 768 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 109 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಕಣ್ಣೂರು 28, ಎರ್ನಾಕುಳಂ, ಕಾಸರಗೋಡು ತಲಾ 14, ವಯನಾಡ್ 11, ತಿರುವನಂತಪುರ, ಪಾಲಕ್ಕಾಡ್ ತಲಾ 10, ಪತ್ತನಂತಿಟ್ಟು 8, ತ್ರಿಶೂರ್ 7, ಕೊಲ್ಲಂ, ಕೊಟ್ಟಾಯಂ 3 ಮತ್ತು ಮಲಪ್ಪುರಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆಗೊಳಗಾಗಿದ್ದವರ ಪೈಕಿ 33,733 ಮಂದಿ ಜನರು ಸೋಂಕಿನಿಂದ ಮುಕ್ತರಾದರು. ತಿರುವನಂತಪುರ 2497, ಕೊಲ್ಲಂ 3359, ಪತ್ತನಂತಿಟ್ಟು 1166, ಆಲಪ್ಪುಳ 2996, ಕೊಟ್ಟಾಯಂ 3491, ಇಡುಕ್ಕಿ 1082, ಎರ್ನಾಕುಳಂ 3468, ತ್ರಿಶೂರ್ 2403, ಪಾಲಕ್ಕಾಡ್ 3000, ಮಲಪ್ಪುರಂ 2908, ಕೊಝಿಕ್ಕೋಡ್ 4242, ವಯನಾಡ್ 4, ಕಣ್ಣೂರು 2349, ಕಾಸರಗೋಡು 282 ಎಂಬಂತೆ ಸೋಂಕು ಮುಕ್ತರಾದರು. ಇದರೊಂದಿಗೆ 4,38,913 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 16,05,471 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 10,02,443 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,67,342 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 35,101 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 3858 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 102 ಹೊಸ ಹಾಟ್ಸ್ಪಾಟ್ಗಳಿವೆ. 3 ಪ್ರದೇಶಗಳನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 740 ಹಾಟ್ಸ್ಪಾಟ್ಗಳಿವೆ.