ತಿರುವನಂತಪುರ: ಕೋವಿಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಲಸಿಕೆಯ 30 ಮಿಲಿಯನ್ ಪ್ರಮಾಣವನ್ನು ಖರೀದಿಸಲು ನಿರ್ಧರಿಸಲಾಗಿದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಲು ಐಸಿಎಂಆರ್ ಅನುಮತಿ ಪಡೆಯುವುದಾಗಿ ಸಿಎಂ ಹೇಳಿದರು.
ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ಪ್ರಸ್ತುತ ಲಭ್ಯವಿಲ್ಲ. ಅವರ ಮೇಲೆ ಲಸಿಕೆ ಪರೀಕ್ಷಿಸಲಾಗುತ್ತಿರುವುದೇ ಇದಕ್ಕೆ ಕಾರಣ. ಅವರಿಗೆ ಲಸಿಕೆ ಹಾಕುವುದರಲ್ಲಿ ಯಾವುದೇ ತೊಂದರೆಗಳಾಗದೆಂದು ತಜ್ಞರು ಹೇಳಿದ್ದಾರೆ ಎಮದವರು ತಿಳಿಸಿದರು.
ಭಾರತದಲ್ಲಿ, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಮತ್ತು ನ್ಯಾಯಾಂಗ ಆಯೋಗವು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ. ಆದ್ದರಿಂದ, ಲಸಿಕೆ ನೀಡಲು ಅನುಮತಿಗಾಗಿ ಐಸಿಎಂಆರ್ ನ್ನು ಸಂಪರ್ಕಿಸಲಾಗುತ್ತದೆ. ಕೋವಿಡ್‍ನಿಂದಾಗಿ ಗರ್ಭಧಾರಣೆಯ ಪರೀಕ್ಷೆಯನ್ನು ಸರಿಯಾಗಿ ಮಾಡದಿರುವ ಪರಿಸ್ಥಿತಿ ಇದೆ. ವಾರ್ಡ್ ಸಮಿತಿಯಲ್ಲಿರುವ ಆಶಾ ಕಾರ್ಯಕರ್ತೆಯರ ನೆರವಿಂದ ರಕ್ತದಲ್ಲಿನ ಗ್ಲೂಕೋಸ್ ಮತ್ತು ರಕ್ತದೊತ್ತಡವನ್ನು ಪರಿಶೀಲಿಸುವ ವ್ಯವಸ್ಥೆ ಆರಂಭಿಸಲಾಗುವುದೆಂದು ಸಿಎಂ ಹೇಳಿದರು.