ನವದೆಹಲಿ: ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ಎನ್‌ಇಇಆರ್‌ಐ)ಯ ವಿಜ್ಞಾನಿಗಳು ಕೋವಿಡ್ -19 ಮಾದರಿಗಳನ್ನು ಪರೀಕ್ಷಿಸಲು 'ಸಲೈನ್ ಗಾರ್ಗಲ್(ಲವಣಯುಕ್ತ ದ್ರಾವಕ) ಆರ್ಟಿ-ಪಿಸಿಆರ್ ವಿಧಾನವನ್ನು' ಅಭಿವೃದ್ಧಿಪಡಿಸಿದ್ದು ಅದು ಮೂರು ಗಂಟೆಗಳಲ್ಲೇ ಫಲಿತಾಂಶ ನೀಡುತ್ತದೆ.
ಲವಣಯುಕ್ತ ದ್ರಾವಕದಿಂದ ಬಾಯಿ ಮುಕ್ಕಳಿಸುವ ವಿಧಾನವು ಆಕರ್ಷಕ ಪ್ರಯೋಜನಗಳನ್ನು ನೀಡುತ್ತದೆ. ಇದು ಸರಳ, ವೇಗದ, ಕಡಿಮೆ ವೆಚ್ಚ, ಪರಿಣಾಮಕಾರಿ ಮತ್ತು ಆರಾಮದಾಯಕವಾಗಿದೆ. ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. ಕನಿಷ್ಠ ಮೂಲಸೌಕರ್ಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಎನ್‌ಇಇಆರ್‌ಐನ ಪರಿಸರ ವೈರಾಲಜಿ ವಿಭಾಗದ ಹಿರಿಯ ವಿಜ್ಞಾನಿ ಕೃಷ್ಣ ಖೈರ್ನರ್ ಅವರು, ಸ್ವ್ಯಾಬ್ ಸಂಗ್ರಹ ವಿಧಾನಕ್ಕೆ ಸಮಯ ಬೇಕಾಗುತ್ತದೆ. ಇದಲ್ಲದೆ, ಅದು ಆಕ್ರಮಣಕಾರಿ ತಂತ್ರವಾದ್ದರಿಂದ ರೋಗಿಗಳಿಗೆ ಸ್ವಲ್ಪ ಅನಾನುಕೂಲವಾಗಿದೆ. ಸಂಗ್ರಹ ಕೇಂದ್ರಕ್ಕೆ ಮಾದರಿಯನ್ನು ಸಾಗಿಸುವಾಗಲೂ ಸ್ವಲ್ಪ ಸಮಯ ಕಳೆದುಹೋಗುತ್ತದೆ.
ಆದರೆ, ಲವಣಯುಕ್ತ ಗಾರ್ಗಲ್ ಆರ್ಟಿ-ಪಿಸಿಆರ್ ವಿಧಾನವು ತ್ವರಿತ, ಆರಾಮದಾಯಕ ಮತ್ತು ರೋಗಿಯ ಸ್ನೇಹಿಯಾಗಿದೆ. ಸ್ಯಾಂಪ್ಲಿಂಗ್ ಅನ್ನು ತ್ವರಿತವಾಗಿ ಮಾಡಲಾಗುತ್ತದೆ. ಅಲ್ಲದೆ ಮೂರು ಗಂಟೆಗಳಲ್ಲಿ ಫಲಿತಾಂಶ ಸಿಗುತ್ತದೆ. ಸಲೈನ್ ಗಾರ್ಗಲ್ ವಿಧಾನವು ಸರಳವಾಗಿದ್ದು ರೋಗಿಯು ಸ್ವತಃ ಮಾದರಿಯನ್ನು ಸಂಗ್ರಹಿಸಬಹುದು ಎಂದು ಡಾ. ಖೈರ್ನರ್ ವಿವರಿಸಿದರು.
ದ್ರಾವಣವನ್ನು ಬಾಯಲ್ಲಿ ಮುಕ್ಕಳಿಸಿ ಅದನ್ನು ಕೊಳವೆಯೊಳಗೆ ಉಗುಳಬೇಕು. ನಂತರ ಅದನ್ನು ಎನ್‌ಇಇಆರ್ ಐ ಸಿದ್ಧಪಡಿಸಿದ ವಿಶೇಷ ಬಫರ್ ದ್ರಾವಣದಲ್ಲಿ ಕೋಣೆಯ ಉಷ್ಣಾಶದಲ್ಲಿಡಲಾಗುತ್ತದೆ. ಈ ದ್ರಾವಣವನ್ನು ಬಿಸಿ ಮಾಡಿದಾಗ ಆರ್ ಎನ್‌ಎ ಟೆಂಪ್ಲೇಟ್ ಉತ್ಪತ್ತಿಯಾಗುತ್ತದೆ. ಇದರಿಂದ ಕೊರೋನಾ ಇದಿಯಾ ಇಲ್ಲವಾ ಎಂದು ತಿಳಿಯಬಹುದು ಎಂದರು.